Friday, October 16, 2026

Dasara Wishes

Happy Dasara
Home Crime ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಬೆಂಗಳೂರು:ಆ-13:(www.justkannada.in) ಇಬ್ಬರು‌ ಹೆಣ್ಣುಮಕ್ಕಳನ್ನು ಕೊಂದು ತಾಯಿ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಶ್ರಿನಗರ ಬಸ್ ನಿಲ್ದಾಣದ ಬಳಿಯ ಮನೆಯೊಂದರಲ್ಲಿ ನಡೆದಿದೆ.

ಮೃತರನ್ನು ತಾಯಿ ರಾಜೇಶ್ವರಿ ( 43), ಮಕ್ಕಳಾದ ಮಾನಸ (17 ) ಹಾಗೂ ಭೂಮಿಕ (15) ಎಂದು ಗುರುತಿಸಲಾಗಿದೆ. ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಗಂಡ ಹಾಗೂ ಹೆಂಡತಿ ನಡುವೆ ಪದೇ ಪದೇ ಜಗಳ ಸಂಭವಿಸುತ್ತಿತ್ತು ಎನ್ನಲಾಗಿದೆ.

ಪತಿ ಸಿದ್ದಯ್ಯ ಬೇರೆ ಮಹಿಳೆಯ ಜತೆ ಸಂಬಂಧವನ್ನು ಹೊಂದಿದ್ದ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊದಲ ಪತ್ನಿ ಇದನ್ನು ಪ್ರಶ್ನೆ ಮಾಡುತಿದ್ದರು. ಅಲ್ಲದೇ ಮಕ್ಕಳಿಬ್ಬರು ತನ್ನ ತಂದೆಗೆ ಅಕ್ರಮ ಸಂಬಂಧವನ್ನು ಬಿಡುವಂತೆ ಒತ್ತಾಯಿಸುತ್ತಿದರು. ಇದರಿಂದ ಆತ ಮನೆಗೆ ಬರುವುದನ್ನು ನಿಲ್ಲಿಸಿದ್ದ. ಅಲ್ಲದೇ ಮನಗೆ ಏನನ್ನೂ ನೀಡುತ್ತಿರಲಿಲ್ಲ. ಇದರಿಂದ ಕಂಗಾಲಾದ ರಾಜೇಶ್ವರಿ ಹಾಗೂ ಇಬ್ಬರು ಮಕ್ಕಳು ರಾತ್ರಿ ಮನೆಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ
Woman, teen daughters hang themselves to death