Sunday, August 9, 2026

BDA Apartments

Home Front Page ಶಿಕಾರಿಪುರದಿಂದ ಸ್ಪರ್ಧೆ ವಿಚಾರದಲ್ಲಿ ಗೊಂದಲ ಇಲ್ಲ: ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ- ಬಿವೈ ವಿಜಯೇಂದ್ರ.

ಶಿಕಾರಿಪುರದಿಂದ ಸ್ಪರ್ಧೆ ವಿಚಾರದಲ್ಲಿ ಗೊಂದಲ ಇಲ್ಲ: ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ- ಬಿವೈ ವಿಜಯೇಂದ್ರ.

ಕೊಪ್ಪಳ,ಜುಲೈ,25,2022(www.justkannada.in): ಶಿಕಾರಿಪುರದಿಂದ ಸ್ಪರ್ಧೆ ವಿಚಾರದಲ್ಲಿ  ಯಾವುದೇ ಗೊಂದಲ ಇಲ್ಲ.  ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.

ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಬಳಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ಶಿಕಾರಿಪುರದೊಂದಿಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ನನ್ನ ಹೆಸರನ್ನ ಬಿಸ್ ವೈ ಘೋಷಿಸಿದ್ದಾರೆ.  ಬಿಜೆಪಿಯಲ್ಲಿ ಉತ್ತರಾಧಿಕಾರಿ ಪ್ರಶ್ನೆಯೇ ಇಲ್ಲ . ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಶಿಕಾರಿಪುರ ಕ್ಷೇತ್ರದ ಜೊತೆಗೆ ಯಡಿಯೂರಪ್ಪ ಅವರಿಗೆ ನಿಕಟ ಸಂಪರ್ಕವಿದೆ. ಅಲ್ಲಿ ಕಾರ್ಯಕರ್ತರು ಮುಖಂಡರ ಒತ್ತಾಸೆಯಂತೆ ಕ್ಷೇತ್ರ ಬಿಟ್ಟು ಕೊಡುವ ಘೋಷಣೆ ಮಾಡಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು. 30-40 ವರ್ಷ ಯಡಿಯೂರಪ್ಪ ಪಕ್ಷಕ್ಕೆ ದುಡಿದಿದ್ದಾರೆ. ಅವರ ಶಕ್ತಿ ಬಳಸಿಕೊಂಡು, ಸ್ಪಷ್ಠವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.

Key words: no confusion – competition-shikaripura-BY Vijayendra.