Sunday, September 20, 2026

BDA Apartments

ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಕಾರಿನ ಕ್ಲಾಸ್ ಒಡೆದು 4.5 ಲಕ್ಷ ರೂ. ಕದ್ದು ಪರಾರ...
Home Crime ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಕಾರಿನ ಕ್ಲಾಸ್ ಒಡೆದು 4.5 ಲಕ್ಷ ರೂ. ಕದ್ದು ಪರಾರಿಯಾದ...

ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಕಾರಿನ ಕ್ಲಾಸ್ ಒಡೆದು 4.5 ಲಕ್ಷ ರೂ. ಕದ್ದು ಪರಾರಿಯಾದ ಕಳ್ಳರು.

ಬೆಂಗಳೂರು,ಜುಲೈ,23,2022(www.justkannada.in): ಖದೀಮರು  ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ಧ ಕಾರಿನ ಕ್ಲಾಸ್ ಒಡೆದು ಬರೊಬ್ಬರಿ 4.5 ಲಕ್ಷ ರೂ ಹಣ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ಲಕ್ಷ್ಮೀಶ್ ಎಂಬುವವರ ಕಾರ್ ಗ್ಲಾಸ್ ಒಡೆದು ಕಳ್ಳರು ಸುಮಾರು 4.5 ಲಕ್ಷ ರೂ.ಹಣ ಕದ್ದು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಲಕ್ಷ್ಮೀಶ್ ಎಂಬುವವರು ಮನೆ ಸಾಲದ ಇಎಂಐ ಕಟ್ಟಲು ಬ್ಯಾಂಕ್​ನಿಂದ ಹಣ ತಂದಿದ್ದರು. ಈ ವೇಳೆ ಪಾನ್ ಕಾರ್ಡ್ ಕೇಳಿದ ಹಿನ್ನೆಲೆ ಲಕ್ಷ್ಮೀಶ್ ವಾಪಸ್ ಬಂದು ಪಾನ್ ಕಾರ್ಡ್ ತರಲು ಮನೆಗೆ ತೆರಳಿದ್ದಾರೆ.   ಈ ವೇಳೆ ಕಳ್ಳರು ಬ್ಯಾಂಕ್​ ನಿಂದ 2 ಬೈಕ್​ ಗಳಲ್ಲಿ ಫಾಲೋ ಮಾಡಿದ್ದು, ಕಾರಿನಲ್ಲಿದ್ಧ ಹಣವನ್ನ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಕಾರಿನ ಕ್ಲಾಸ್ ಒಡೆದು 4.5 ಲಕ್ಷ ರೂ. ಕದ್ದು ಪರಾರ...

ಸದ್ಯ ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 4.5 lakh –theft-car -bangalore