Thursday, August 6, 2026

BDA Apartments

Home Front Page ಹೆಚ್.ಡಿಡಿ, ಹೆಚ್.ಡಿಕೆಗೆ ಅವಕಾಶ ಮಾಡಿಕೊಟ್ಟಿದ್ದೀರಿ: ನನಗೂ ಅವಕಾಶ ಮಾಡಿಕೊಡಿ- ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆ...

ಹೆಚ್.ಡಿಡಿ, ಹೆಚ್.ಡಿಕೆಗೆ ಅವಕಾಶ ಮಾಡಿಕೊಟ್ಟಿದ್ದೀರಿ: ನನಗೂ ಅವಕಾಶ ಮಾಡಿಕೊಡಿ- ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್.

ರಾಮನಗರ,ಜುಲೈ,20,2022(www.justkannada.in):  ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ನಡೆಯಲಿದ್ದು, ಈಗಿನಿಂದಲೇ ತಯಾರಿ ನಡೆಸಿಕೊಳ್ಳುತ್ತಿವೆ. ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ನಡುವೆ ಪರೋಕ್ಷ ಗುದ್ದಾಟ ನಡೆಯುತ್ತಿದೆ.

ಇದೀಗ ಮುಖ್ಯಮಂತ್ರಿ ಆಗುವ ಆಸೆಯನ್ನ ಮತ್ತೆ ಡಿಕೆ ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ರಾಮನಗರದಲ್ಲಿ ಚಾಮುಂಡೇಶ್ವರಿ ಉತ್ಸವದಲ್ಲಿ ಮಾತನಾಡಿರುವ ಡಿಕೆಶಿ, ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ. ತಾಯಿಯ ಸನ್ನಿಧಿಯಿಂದ ಕೇಳುತ್ತಿದ್ದೇನೆ, ನನಗೂ ಸಿಎಂ ಆಗುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ನನಗೆ ಹೂವಿನ ಹಾರ ಬೇಡ. ನಾನು ಯಾರನ್ನು ನಿಲ್ಲಿಸುತ್ತೆನೆ ಅವರಿಗೆ ಸಹಕಾರ ಕೊಡಬೇಕು. ನನಗೆ ಆಶೀರ್ವಾದ ಮಾಡಬೇಕು. ರಾಜ್ಯದಲ್ಲಿ ಸೇವೆಯನ್ನ ಮಾಡುವ ಅವಕಾಶ ಕಲ್ಪಿಸಬೇಕು. ನಿಮ್ಮ ಜಿಲ್ಲೆಯ ಮಗನಿಗೆ ಕೊಡಬೇಕೆಂಬ ಆಸೆಯಿದ್ದರೆ ಮಾಡಬೇಕು. ನನಗೊಮ್ಮೆ ಸಿಎಂ ಆಗಲು ಅವಕಾಶ ಮಾಡಿಕೊಡಿ ಎಂದು ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

Key words: kpcc-president- DK Shivakumar expressed -desire – become -CM