Friday, August 7, 2026

BDA Apartments

Home Front Page ತಮ್ಮ ಬಗ್ಗೆ ನಾಲಿಗೆ ಹರಿಬಿಟ್ಟ ಕೆ.ಎನ್ ರಾಜಣ್ಣಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ತಮ್ಮ ಬಗ್ಗೆ ನಾಲಿಗೆ ಹರಿಬಿಟ್ಟ ಕೆ.ಎನ್ ರಾಜಣ್ಣಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ಬೆಂಗಳೂರು,ಜುಲೈ,1,2022(www.justkannada.in): ತಮ್ಮ ಬಗ್ಗೆ  ವಿವಾದಾತ್ಮಕ ಹೇಳಿಕೆಯನ್ನ ನೀಡುವ ಮೂಲಕ ನಾಲಿಗೆ ಹರಿಬಿಟ್ಟಿದ್ಧ ಮಾಜಿ ಶಾಸಕ ಕೆ.ಎನ್ ರಾಜಣ್ಣಗೆ ಮಾಜಿ ಪ್ರಧಾನಿ  ಹೆಚ್.ಡಿ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ದೇವೇಗೌಡರು, ಗೌಡರಿಗೆ ಕೂರಲು ನಿಲ್ಲಲು ಆಗಲ್ಲ ಎಂದು ಅಪಹಾಸ್ಯ ಮಾಡುತ್ತಾರೆ ಆದರೆ ನಾವು ಎದೆಗುಂದದೇ ಎದುರಾಳಿಗಳ ವಿರುದ್ಧ ಹೋರಾಡುತ್ತೇವೆ.  ನಮ್ಮ ಹೋರಾಟದ ಬದುಕಿನಲ್ಲಿ ಶಕ್ತಿ ಇದೆ ಎಂದಿದ್ದಾರೆ.

ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ  ಕೆ.ಎನ್​.ರಾಜಣ್ಣ, ‘ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ. ನಾಲ್ವರು ಹೊತ್ಕೊಂಡ್ ಹೋಗೋದು ಹತ್ತಿರದಲ್ಲೇ ಇದೆ. ಎಂದು ಹೇಳಿಕೆ ನೀಡಿದ್ದರು.

Key words: Former Prime Minister -HD Deve Gowda- KN Rajanna