Sunday, September 20, 2026

BDA Apartments

ಪ್ರಧಾನಿ ಮೋದಿ ರಾಜ್ಯ ಪ್ರವಾಸ ಅಂತ್ಯ ಬೆನ್ನಲ್ಲೆ ಕುಟುಂಬ ಸಮೇತ ಲಂಡನ್ ಪ್ರವಾ...
Home Front Page ಪ್ರಧಾನಿ ಮೋದಿ ರಾಜ್ಯ ಪ್ರವಾಸ ಅಂತ್ಯ ಬೆನ್ನಲ್ಲೆ ಕುಟುಂಬ ಸಮೇತ ಲಂಡನ್ ಪ್ರವಾಸಕ್ಕೆ ತೆರಳಿದ ಮಾಜಿ...

ಪ್ರಧಾನಿ ಮೋದಿ ರಾಜ್ಯ ಪ್ರವಾಸ ಅಂತ್ಯ ಬೆನ್ನಲ್ಲೆ ಕುಟುಂಬ ಸಮೇತ ಲಂಡನ್ ಪ್ರವಾಸಕ್ಕೆ ತೆರಳಿದ ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು,ಜೂನ್,21,2022(www.justkannada.in)  ಎರಡು ದಿನಗಳ  ಕರ್ನಾಟಕ ರಾಜ್ಯ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ದೆಹಲಿಗೆ ತೆರಳಿದ ಬೆನ್ನಲ್ಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ.

ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ವಿವಿಧ ಕಾರ್ಯಕ್ರಮಗಳನ್ನ ಉದ್ಘಾಟಿಸಿ  ಇಂದು  ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ  ಭಾಗಿಯಾಗಿದ್ದರು. ಬಳಿಕ ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆದರು.

ಇನ್ನು ಪ್ರಧಾನಿ ಮೋದಿ ಅವರ ಕರ್ನಾಟಕ ಭೇಟಿ ಅಂತ್ಯಗೊಂಡ ಬೆನ್ನಲ್ಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಕುಟುಂಬ ಸಮೇತ ಇಂಗ್ಲೆಂಡ್ ಗೆ  ಪ್ರಯಾಣ ಬೆಳೆಸಿದ್ದಾರೆ. ಬಿಎಸ್​ವೈ ಜೊತೆ ಪುತ್ರ ಬಿವೈ ವಿಜಯೇಂದ್ರ ಕೂಡ ಇದ್ದಾರೆ.

Key words: Former CM- BS Yeddyurappa-trip – London- with – family