Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ವಿವಾದದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಯದುವೀರ್.

ವಿವಾದದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಯದುವೀರ್.

ಮೈಸೂರು,ಜೂನ್,18,2022(www.justkannada.in): ಜೂನ್ 21 ರಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಮಧ್ಯೆ ಯೋಗ ವೇದಿಕೆ ಹಂಚಿಕೊಳ್ಳುವ ವಿಚಾರ ಕುರಿತು ಸಾಕಷ್ಟು  ಚರ್ಚೆಯಾಗಿತ್ತು.

ಇದೀಗ ವಿವಾದದ ಬಳಿಕ ಎಚ್ಚೆತ್ತ  ಮೈಸೂರು ಜಿಲ್ಲಾಡಳಿತ ಪ್ರಧಾನಿ ಮೋದಿ ಅವರ ಜತೆ ವೇದಿಕೆಯಲ್ಲಿ ಯೋಗ ಮಾಡಲು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೂ ಆಹ್ವಾನ ನೀಡಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ಜೊತೆ ಯದುವೀರ್ ವೇದಿಕೆ ಹಂಚಿಕೊಳ್ಳಲಿದ್ದಾರೆ.corona-increase-country-yadaveer-prayer-chamundeshwari

ಈ ಹಿಂದೆ ಯೋಗ ವೇದಿಕೆಗೆ ಐವರಿಗೆ ಮಾತ್ರ ಅವಕಾಶ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿತ್ತು.  ಪ್ರಧಾನಮಂತ್ರಿ,‌ ಸಿಎಂ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ‌ ಹಾಗೂ ಕೇಂದ್ರ ಆಯುಷ್ ಮಂತ್ರಿಗಳು‌ ಯೋಗಾಭ್ಯಾಸದಲ್ಲಿ‌ ಪಾಲ್ಗೊಳ್ಳಲಿದ್ದು, ಇದೀಗ ರಾಜ್ಯ ಸರ್ಕಾರ ಗಣ್ಯರ ಪಟ್ಟಿಯಲ್ಲಿ ಯದುವೀರ್ ಹಾಗೂ ಪ್ರಮೋದಾದೇವಿ ಅವರ ಹೆಸರು ಸೇರಿಸಿದೆ.

ಯೋಗಾಭ್ಯಾಸದ ನಂತರ ಮೈಸೂರು ಅರಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯಲಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನ‌ದ ಮೇರೆಗೆ ಪ್ರಧಾನಿ ಮೋದಿ ಅರಮನೆಗೆ ಭೇಟಿ ನೀಡಲಿದ್ದಾರೆ. ಸುಮಾರು ಒಂದು ಗಂಟೆಗಳ‌ ಕಾಲ ಅರಮನೆಯಲ್ಲಿ ರಾಜ ವಂಶಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

Key words: yoga day-june 21-mysore-Yaduvir -PM Modi