Tuesday, August 4, 2026

BDA Apartments

Home Front Page ಭಗತ್ ಸಿಂಗ್ ಹೆಸರು ಯಾವ ಯೋಜನೆಗೆ ಇಟ್ಟಿದ್ದೀರಿ..? ನೇತಾಜಿ, ತಿಲಕ್ ನೆನಪಾಗಲಿಲ್ವಾ..? ಕೇಂದ್ರ ಸಚಿವ ಪ್ರಹ್ಲಾದ್...

ಭಗತ್ ಸಿಂಗ್ ಹೆಸರು ಯಾವ ಯೋಜನೆಗೆ ಇಟ್ಟಿದ್ದೀರಿ..? ನೇತಾಜಿ, ತಿಲಕ್ ನೆನಪಾಗಲಿಲ್ವಾ..? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ,ಮೇ,26,2022(www.justkannada.in): ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್ ಅವರ ಪಠ್ಯ ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ದಿವಾಳಿ ಆಗಿದೆ. ಹೆಡ್ಗೆವಾರ್  ಪಾಠ ಸೇರಿಸಿದ್ದಕ್ಕೆ  ವಿವಾದ ಮಾಡುತ್ತಿದ್ದಾರೆ ಕಾಂಗ್ರೆಸ್ ಕಾಲದಲ್ಲಿ ಪಠ್ಯ ಪುಸ್ತಕ ಹೇಗಿತ್ತು ..? ಸುಳ್ಳು ಹೇಳುವುದರಲ್ಲಿ ನಿಸ್ಸಿಮ. ಪಠ್ಯದಲ್ಲಿ ನಾರಾಯಣಗುರು ಅವರ ಪಾಠ ತೆಗೆದಿಲ್ಲ.  ಭಗತ್ ಸಿಂಗ್ ಹೆಸರು ಯಾವ ಯೋಜನೆಗೆ ಇಟ್ಟೀದ್ದೀರಿ. 298 ಯೋಜನೆಗಳಿಗೆ  ರಾಜೀವ್, ಇಂದಿರಾಗಾಂಧಿ ಹೆಸರನ್ನೇ ಇಟ್ಟಿದ್ದೀರಿ. ಈ ವೇಳೆ ನೇತಾಜಿ ತಿಲಕ್ ನೆನಪಾಗಲಿಲ್ವಾ ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯ 2ನೇ ಬಾರಿ ಸಿಎಂ ಆಗಲ್ಲ.  ಸಿದ್ದರಾಮಯ್ಯ ಮತ್ತು  ಡಿ.ಕೆ ಶಿವಕುಮಾರ್  ಕಚ್ಚಾಟಕ್ಕೆ ಕಾಂಗ್ರೆಸ್ ಹಾಳಾಗುತ್ತೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

Key words:  project -Bhagat Singh –name-Union Minister -Prahlad Joshi -congress