Sunday, September 20, 2026

BDA Apartments

ಮುಸ್ಲಿಂ ರಾಷ್ಟ್ರಗಳಿಂದ ಅಮದು ಮಾಡಿಕೊಳ್ಳುವ ಪೆಟ್ರೋಲ್ ಬೇಡ ಅಂತಾ ಹೇಳಲಿ- ಬಿ...
Home Front Page ಮುಸ್ಲಿಂ ರಾಷ್ಟ್ರಗಳಿಂದ ಅಮದು ಮಾಡಿಕೊಳ್ಳುವ ಪೆಟ್ರೋಲ್ ಬೇಡ ಅಂತಾ ಹೇಳಲಿ- ಬಿಜೆಪಿಗೆ ಕಾಂಗ್ರೆಸ್ ಶಾಸಕ ಸವಾಲು.

ಮುಸ್ಲಿಂ ರಾಷ್ಟ್ರಗಳಿಂದ ಅಮದು ಮಾಡಿಕೊಳ್ಳುವ ಪೆಟ್ರೋಲ್ ಬೇಡ ಅಂತಾ ಹೇಳಲಿ- ಬಿಜೆಪಿಗೆ ಕಾಂಗ್ರೆಸ್ ಶಾಸಕ ಸವಾಲು.

ಬೆಂಗಳೂರು,ಮಾರ್ಚ್,30,2022(www.justkannada.in):  ಹಲಾಲ್ ಮಾಂಸ ಖರೀದಿಗೆ ನಿರ್ಬಂಧಿಸಲು ಹಿಂದೂಪರ ಸಂಘಟನೆಗಳು ಅಭಿಯಾನ ಆರಂಭಿಸಿದ್ದು ಮಾಜಿ ಸಚಿವ ಸಿ.ಟಿ ರವಿ ಸೇರಿ ಕೆಲ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ. ಈ ಸಂಬಂಧ ಬಿಜೆಪಿಗೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷಾದ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ರಿಜ್ವಾನ್ ಅರ್ಷಾದ್, ಮುಸ್ಲಿಂ ರಾಷ್ಟ್ರಗಳಿಂದ ಪೆಟ್ರೋಲ್ ಅಮದು ಮಾಡಿಕೊಳ್ಳಲಾಗುತ್ತದೆ. ಮುಸ್ಲಿಂ ರಾಷ್ಟ್ರಗಳಿಂದ  ಬರುವ ಪೆಟ್ರೋಲ್ ಬೇಡ  ಅಂತಾ ಹೇಳಲಿ ಎಂದು ಸವಾಲು ಹಾಕಿದರು. ಮುಸ್ಲಿಂ ರಾಷ್ಟ್ರಗಳಿಂದ ಅಮದು ಮಾಡಿಕೊಳ್ಳುವ ಪೆಟ್ರೋಲ್ ಬೇಡ ಅಂತಾ ಹೇಳಲಿ mla

ರಾಜಕಾರಣಕ್ಕಾಗಿ ಹಿಂದೂ ಮತ ಒಗ್ಗೂಡಿಸಲು ಯತ್ನಿಸಲಾಗುತ್ತದೆ. ರಾಜಕಾರಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಸಮಾಜ ಒಡೆಯುವ ಯತ್ನ ನಡೆಯುತ್ತಿದೆ.  ಬಿಜೆಪಿಯವರ ಟಾರ್ಗೆಟ್ ಮುಸ್ಲಿಂರಲ್ಲ ಎಲೆಕ್ಷನ್. ಇಲ್ಲಿವರೆಗೂ ಹಲಾಲ್ ಮಾಂಸ ತಿನ್ನುತ್ತಿರಲಿಲ್ಲವಾ..? ಇದರಿಂದಾಗಿ ಮುಸ್ಲಿಂರಿಗೆ ಮಾತ್ರವಲ್ಲ ಎಲ್ಲರಿಗೂ ತೊಂದರೆ  ಎಂದು ಬೇಸರ ವ್ಯಕ್ತಪಡಿಸಿದರು.

Key words: petrol- imported – Muslim- countries- Congress MLA