Thursday, August 20, 2026

BDA Apartments

Home Front Page ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ..? ಶಾಸಕ ಎಂ.ಪಿ ರೇಣುಕಾಚಾರ್ಯ ಆಕ್ರೋಶ.

ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ..? ಶಾಸಕ ಎಂ.ಪಿ ರೇಣುಕಾಚಾರ್ಯ ಆಕ್ರೋಶ.

ದಾವಣಗೆರೆ,ಜನವರಿ,24,2022(www.justkannada.in):  ಸಚಿವ ಸಂಪುಟ ವಿಸ್ತರಣೆ ವಿಚಾರ ಸದ್ಯ ಚರ್ಚೆಗೆ ಬಂದಿದ್ದು ಈ ನಡುವೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ  ಹೊನ್ನಾಳಿಯಲ್ಲಿ ಮಾತನಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ…? ಮೈತ್ರ ಸರ್ಕಾರ ಬೀಳಿಸೋಕೆ ನಾನು ಯತ್ನಾಳ್ ಎಷ್ಟು ಪ್ರಯತ್ನ ಮಾಡಿದ್ದೀವಿ ನಮಗೆ ಸಚಿವರಾಗುವ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಕೆಲ ಸಚಿವರಂತೂ ಶಾಸಕರ ಫೋನೇ ಎತ್ತಲ್ಲ. ಶಾಸಕರ ಪತ್ರಕ್ಕೂ ಉತ್ತರ ಕೊಡಲ್ಲ. ಶಾಸಕರು ಪತ್ರವನ್ನ ಕೊಟ್ಟರೆ ಉತ್ತರ ಕೊಡಬೇಕು.  ಆದರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಅಂತಾ ಸಚಿವರು ಬೇಕಾ ಎಂದು ಕಿಡಿಕಾರಿದರು.

Key words:  BJP government – minister –mla-MP Renukacharya