ಸೋಲಾರ್ ತಂತಿಗೆ ಸಿಲುಕಿ ಚಿರತೆ ನರಳಾಟ..

MYSORE-FOREST-SOLAR-FENCE-leopard 

 

ಮೈಸೂರು, ಜ.23, 2022 : (www.justkannada.in news): ಜಮೀನಿನ ಸೋಲಾರ್ ತಂತಿಗೆ ಸಿಲುಕಿ ಚಿರತೆ ನರಳಾಟ. ಬಾಳೆ ತೋಟದಲ್ಲಿ ರಕ್ಷಣೆಗೆ ಅಳವಡಿಸಿದ ಸೋಲಾರ್ ತಂತಿ ಚಿರತೆಯ ಬಲಗಾಲು ಸಿಲುಕಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮುಳ್ಳೂರು ಗ್ರಾಮದ ಬಾಳೆ ತೋಟದಲ್ಲಿ ಘಟನೆ.

ಸರಗೂರು ತಾಲೂಕಿನ ಮುಳ್ಳೂರು ಮತ್ತು ನಂಜನಗೂಡು ತಾಲ್ಲೂಕಿನ ಜಾಲಹಳ್ಳಿ ಗ್ರಾಮದ ಸಮೀಪದ ಬಾಳೆತೋಟದಲ್ಲಿ ಸೋಲಾರ್ ತಂತಿಗೆ ಸಿಲುಕಿರುವ ಚಿರತೆ ಬಲಗಾಲು.

ಸೋಲಾರ್ ತಂತಿಯಿಂದ ಬಿಡಿಸಿಕೊಳ್ಳಲು ಚೀರಾಟ ನಡೆಸಿದ 4 ವರ್ಷದ ಗಂಡು ಚಿರತೆ. ರಾತ್ರಿಯೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನುಗು ಅರಣ್ಯ ಇಲಾಖೆಯ ಆರ್ ಎಫ್ ಒ ಗಮನಕ್ಕೆ. ನಂತರ ಹೆಡಿಯಾಲ ಅರಣ್ಯ ಇಲಾಖೆ ಎಸಿಎಫ್ ಗಮನಕ್ಕೆ ತಂದ ಮುಳ್ಳೂರು ಗ್ರಾಮಸ್ಥರು.

ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಅರವಳಿಕೆ ಮದ್ದನ್ನು ನೀಡಿ ಚಿಕಿತ್ಸೆ. ಬಳಿಕ ಅರಣ್ಯದೊಳಗೆ ಚಿರತೆ ಬಿಡುಗಡೆ ಮಾಡಿದ ಸಿಬ್ಬಂದಿ.

KEY WORDS : MYSORE-FOREST-SOLAR-FENCE-leopard