ದೇಶದಲ್ಲಿ ಕೊರೋನಾ ಕೊಂಚ ಇಳಿಕೆ: ಒಂದೇ ದಿನದಲ್ಲಿ 3,06,064 ಹೊಸ ಕೋವಿಡ್ ಪ್ರಕರಣ ಪತ್ತೆ.

0
1

ನವದೆಹಲಿ,ಜನವರಿ,24,2022(www.justkannada.in):  ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ  ಹೊಸದಾಗಿ 3,06,064 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 3,06,064 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.  ಇದೇ ಅವಧಿಯಲ್ಲಿ 439 ಮಂದಿ  ಕೋವಿಡ್ ನಿಂದ ಮೃತಪಟ್ಟಿದ್ದಾರೆ.

ಸದ್ಯ ದೇಶದಲ್ಲಿ ಸಂಖ್ಯೆ 22 ,49,335 ಸಕ್ರಿಯ ಪ್ರಕರಣಗಳಿವೆ. ಪ್ರತಿದಿನ ದಾಖಲಾಗುವ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 20.75ರಷ್ಟಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 2,43,495 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,68,04,145ಕ್ಕೆ ಏರಿಕೆಯಾಗಿದೆ.

Key words: covid-detection-country-single day

ENGLISH SUMMARY…

Corona cases in the country decreases slightly: 3,06,064 cases reported in one day
New Delhi, January 24, 2022 (www.justkannada.in): The number of COVID-19 Pandemic cases in the country has decreased a little. About 3,06,064 cases have been reported in the country in the last 24 hours.
According to the information provided by the Union Health Ministry, 439 persons have lost their lives in the same period. There are presently 22,49,335 active cases. The percentage of daily new cases is 20.75%. About 2,43,495 people have recovered and discharged from the hospitals in the last 24 hours, increasing the tally to 3,68,04,145.
Keywords: COVID-19 Pandemic/ decrease/ country