Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಮೈಸೂರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿಯ ಅಸಲಿ ಸ್ಟೋರಿ ಇಲ್ಲಿದೆ ನೋಡಿ..!

ಮೈಸೂರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿಯ ಅಸಲಿ ಸ್ಟೋರಿ ಇಲ್ಲಿದೆ ನೋಡಿ..!

Mysore-old-Muslim-couple-marriage

 

ಮೈಸೂರು, ಜ.23, 2022 : (www.justkannada.in news ) ಇಳಿ ವಯಸ್ಸಿನಲ್ಲಿ ಮದುವೆಯಾಗಿ ಅಚ್ಚರಿ ಮೂಡಿಸಿದ ವೃದ್ಧರು. ಫಾತಿಮಾಬೇಗಂ (65) ಕೈ ಹಿಡಿದ ಮುಸ್ತಫಾ (85) ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ಘಟನೆ. ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆಯಾದ ವೃದ್ಧರು.

ಕುರಿ ಸಾಕಾಣಿಕೆ ಮಾಡಿ ತನ್ನ 9 ಮಕ್ಕಳಿಗೆ ಮದುವೆ ಮಾಡಿರುವ ಹಾಜಿ ಮುಸ್ತಫಾ. ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನ ಕಳೆದುಕೊಂಡಿದ್ದರು. ಮಕ್ಕಳಿಗೆಲ್ಲಾ ಮದುವೆ ಮಾಡಿದ್ದರಿಂದ ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು.

ಈ ಒಂಟಿ ಜೀವನಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ಅಜ್ಜ ಮುಸ್ತಫಾ. ಆಗ ಕಣ್ಣಿಗೆ ಬಿದ್ದದ್ದು ಅದೇ ಏರಿಯಾದ ಫಾತಿಮಾ ಬೇಗಂ. ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ. ಫಾತಿಮಾ ಬೇಗಂರನ್ನ ಮದುವೆಯಾಗಲು ಮನವಿ ಮಾಡಿದ್ದ ಮುಸ್ತಫಾ ಅವರಿಗೆ ನಿರಾಸೆ ಮಾಡದೆ ಮದುವೆಯಾಗಲು ಒಪ್ಪಿದ ಫಾತಿಮಾ ಬೇಗಂ.

ಮೈಸೂರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿಯ ಅಸಲಿ ಸ್ಟೋರಿ ಇಲ್ಲ...

ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಚಿಸಿದ ತಂದೆಗೆ ಶುಭಹಾರೈಸಿದ ಮಕ್ಕಳು. ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದ್ರೂ ತಂದೆಯ ನಿರ್ಧಾರಕ್ಕೆ ಜೈ ಎಂದು ನಿಖಾ. ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾಬೇಗಂರನ್ನ ವರಿಸಿದ ಮುಸ್ತಫಾ.

key words : Mysore-old-Muslim-couple-marriage