Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಯಾವುದೇ ಕಾರಣಕ್ಕೂ ಪಾದಯಾತ್ರೆ ಸ್ಥಗಿತ ಇಲ್ಲ- ಸಂಸದ ಡಿ.ಕೆ ಸುರೇಶ್ ಸ್ಪಷ್ಟನೆ.

ಯಾವುದೇ ಕಾರಣಕ್ಕೂ ಪಾದಯಾತ್ರೆ ಸ್ಥಗಿತ ಇಲ್ಲ- ಸಂಸದ ಡಿ.ಕೆ ಸುರೇಶ್ ಸ್ಪಷ್ಟನೆ.

ರಾಮನಗರ,ಜನವರಿ,13,2022(www.justkannada.in):  ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ಸ್ಥಗಿತಗೊಳಿಸಲ್ಲ. ನಿಗದಿಯಂತೆ ಪಾದಯಾತ್ರೆ ಮುಂದುವರೆಯಲಿದೆ ಎಂದು  ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಸ್ಪಷ್ಟಪಡಿಸಿದರು.

ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚತ್ತ ಸರ್ಕಾರ ಕಾಂಗ್ರೆಸ್ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ನಿನ್ನೆ ಆದೇಶಿಸಿದೆ.ಅಲ್ಲದೆ ಆದೇಶ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ಕುರಿತು ಕನಕಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ ಸುರೇಶ್, ನಿಗದಿಯಂತೆ ಪಾದಯಾತ್ರೆ  ಮುಂದುರೆಯಲಿದ್ದು,  ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ. ರಾತ್ರಿ 12 ಗಂಟೆಗೆ ಅಧಿಕಾರಿಗಳು ನೋಟಿಸ್ ತಂದಿದ್ರು.  ಪಾದಯಾತ್ರೆ ಸ್ಥಗಿತಗೊಳಿಸುವಂತೆ ಡಿಸಿ ನೊಟಿಸ್ ಕಳಿಸಿದ್ದರು ನಾವು ಆ ನೋಟಿಸ ಅನ್ನ ಮುಟ್ಟಿಲ್ಲ ಎಂದರು.free rice - BPL card -holders - - Center- MP- DK Suresh

ಬೇರೆ ಜಿಲ್ಲೆಯಿಂದ ಬರುವವರನ್ನ ತಡೆಯುವ ಪ್ರಯತ್ನ ಆಗಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ  ಸರ್ಕಾರಕ್ಕೆ ಪ್ರತಿಷ್ಟೆ ಇದೆ. ಮೇಕದಾಟು ಯೋಜನೆ ಜಾರಿ ಮಾಡಲಿ  ಕೊರೊನಾ ಹೆಚ್ಚಳ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ ಎಂದು ಡಿ.ಕೆ ಸುರೇಶ್ ಆರೋಪಿಸಿದರು.

Key words: no  breakdown –padayatra-MP-DK Suresh