Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕಾಂಗ್ರೆಸ್ ಪಾದಯಾತ್ರೆ ಸಮಾರೋಪಕ್ಕೆ ಬಿಬಿಎಂಪಿ ಷರತ್ತುಬದ್ಧ ಅನುಮತಿ…?

ಕಾಂಗ್ರೆಸ್ ಪಾದಯಾತ್ರೆ ಸಮಾರೋಪಕ್ಕೆ ಬಿಬಿಎಂಪಿ ಷರತ್ತುಬದ್ಧ ಅನುಮತಿ…?

ಬೆಂಗಳೂರು,ಜನವರಿ,12,2022(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು ಬೆಂಗಳೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಷರತ್ತುಬದ್ಧ ಅನುಮತಿ ನೀಡಿದೆ ಎನ್ನಲಾಗಿದೆ.

ಪಾಲಿಕೆ ಆಟದ ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಸಲು ಅನುಮತಿ ಬಗ್ಗೆ ಕಾಂಗ್ರೆಸ್  ಪತ್ರ ಬರೆದಿತ್ತು. ಬಿಬಿಎಂಪಿ ಸಮಾರಂಭಕ್ಕೆ ಜನವರಿ 4 ರಂದೇ ಷರತ್ತುಬದ್ಧ ಅನುಮತಿ ನೀಡಿದೆ. ಕೊವಿಡ್-19​ ನಿಯಮಗಳನ್ನು ಉಲ್ಲಂಘಿಸದಂತೆ ಸೂಚನೆ ಕೊಡಲಾಗಿದೆ.ಕಾಂಗ್ರೆಸ್ ಪಾದಯಾತ್ರೆ ಸಮಾರೋಪಕ್ಕೆ ಬಿಬಿಎಂಪಿ ಷರತ್ತುಬದ್ಧ ಅನುಮತಿ…? paday

ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್​​ಗೆ ಪತ್ರ ಬರೆದಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಪಕ್ಕದಲ್ಲಿರುವ ಮೈದಾನದಲ್ಲಿ ಜನವರಿ 18 ಹಾಗೂ 19 ಎರಡು ದಿನ ಕಾರ್ಯಕ್ರಮಕ್ಕೆ ಬಿಬಿಎಂಪಿ ಅನುಮತಿ ನೀಡಿದೆ.

ಈ ನಡುವೆ ಬಿಬಿಎಂಪಿಯಿಂದ ಅನುಮತಿ ವಿಚಾರವಾಗಿ ಮತ್ತೊಂದು ಮಾತು ಕೇಳಿಬಂದಿದೆ. ಕಾಂಗ್ರೆಸ್, ಕೊರೊನಾ ರೂಲ್ಸ್ ಜಾರಿಗೆ ಬರುವ ಮುನ್ನ ಅನುಮತಿ ಪಡೆದಿದೆ. ಜನವರಿ 18, 19 ರಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ಪಡೆದಿದೆ.  ಆದರೆ ಹಾಲಿ ಕೊರೊನಾ ರೂಲ್ಸ್ ಜಾರಿಗೆ ಬಂದ ಕಾರಣ, ಅನುಮತಿ ರದ್ದುಪಡಿಸಲು ಬಿಬಿಎಂಪಿ ಮುಂದಾಗಿದೆ ಎಂದೂ ಹೇಳಲಾಗುತ್ತಿದೆ.

Key words: BBMP –Conditional- Permission – Congress -padayatra