Thursday, August 13, 2026

BDA Apartments

Home Front Page ಜ.18 ಮತ್ತು 19ರ ಕಾಂಗ್ರೆಸ್ ಸಮಾವೇಶಕ್ಕೆ ನೀಡಿದ್ಧ ಅನುಮತಿ ರದ್ಧು.

ಜ.18 ಮತ್ತು 19ರ ಕಾಂಗ್ರೆಸ್ ಸಮಾವೇಶಕ್ಕೆ ನೀಡಿದ್ಧ ಅನುಮತಿ ರದ್ಧು.

ಬೆಂಗಳೂರು,ಜನವರಿ,13,2022(www.justkannada.in):  ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಸಲು ಕಾಂಗ್ರೆಸ್ ಗೆ ನೀಡಿದ್ಧ ಅನುಮತಿಯನ್ನು ಬಿಬಿಎಂಪಿ ರದ್ಧುಗೊಳಿಸಿದೆ.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು ಜನವರಿ 18 ಮತ್ತು 19 ರಂದು ಸಮಾರೋಪ ಸಮಾರಂಭವನ್ನ ನ್ಯಾಷನಲ್ ಕಾಲೇಜು ಗ್ರೌಂಡ್ಸ್ ಮೈದಾನದಲ್ಲಿ ಆಯೋಜಿಸಿತ್ತು. ಕಾಂಗ್ರೆಸ್ ಸಮಾವೇಶಕ್ಕೆ ಜನವರಿ 4 ರಂದೇ ಬಿಬಿಎಂಪಿ ಅನುಮತಿ ನೀಡಿತ್ತು.

ಆದರೆ ಕೊರೋನಾ ಹೆಚ್ಚುತ್ತಿರುವ  ವೇಳೆ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ಹೈಕೋರ್ಟ್ ಸರ್ಕಾರ ಮತ್ತು ಕಾಂಗ್ರೆಸ್ ಗೆ ನಿನ್ನೆ ತರಾಟೆ ತೆಗೆದುಕೊಂಡಿತ್ತು. ಹೀಗಾಗಿ ಹೈಕೋರ್ಟ್ ಚಾಟಿಗೆ ಎಚ್ಚೆತ್ತ ಸರ್ಕಾರ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಜನವರಿ 18 ಮತ್ತು 19ರ ಕಾಂಗ್ರೆಸ್ ಸಮಾವೇಶಕ್ಕೆ ನೀಡಿದ್ಧ ಅನುಮತಿಯಲ್ಲಿ ಬಿಬಿಎಂಪಿ ರದ್ಧುಗೊಳಿಸಿದೆ.

Key words: congress – Convention-bbmp-cancel