Friday, October 2, 2026

BDA Apartments

Home Front Page ಗಾಂಧೀಜಿಯವರ ತತ್ವಗಳು  ಸಾರ್ವಕಾಲಿಕ ಮಾರ್ಗದರ್ಶಿ-ಸಚಿವ ಯತೀಂದ್ರ ಸಿದ್ದರಾಮಯ್ಯ

ಗಾಂಧೀಜಿಯವರ ತತ್ವಗಳು  ಸಾರ್ವಕಾಲಿಕ ಮಾರ್ಗದರ್ಶಿ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,2,2026 (www.justkannada.in) ಅಹಿಂಸೆ, ಶಾಂತಿ, ಸತ್ಯ ಹಾಗೂ ಸಾಮಾಜಿಕ ಸಮಾನತೆಯ ಸಿದ್ಧಾಂತಗಳ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ದಿಕ್ಸೂಚಿ ನೀಡಿದ ಗಾಂಧೀಜಿಯವರ ತತ್ವಗಳು  ಸಾರ್ವಕಾಲಿಕ ಮಾರ್ಗದರ್ಶಿ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನ  ಗಾಂಧಿ ವೃತ್ತಕ್ಕೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಅವರು ಭಕ್ತಿಪೂರ್ವಕ ಗೌರವ ನಮನ ಸಲ್ಲಿಸಿದರು.Gandhiji yathindra siddaramaiah

ದೇಶ ಕಟ್ಟುವಲ್ಲಿ ಮತ್ತು ಪ್ರತಿಯೊಬ್ಬ ನಾಗರಿಕನಲ್ಲೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಗಾಂಧೀಜಿಯವರ ವಿಚಾರಧಾರೆಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು  ತಿಳಿಸಿದರು.Gandhiji yathindra siddaramaiah.jpg1

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಹರೀಶ್ ಗೌಡ, ಶ್ರೀವತ್ಸ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.

Key words:  Gandhiji,  principles, Minister, Yathindra Siddaramaiah, Mysore

English Summary
Title

Dr. Yathindra Siddaramaiah Honors Mahatma Gandhi Principles in Mysuru

Short Description
Dr. Yathindra Siddaramaiah, the District In-charge Minister for Mysuru, inaugurated the Gandhi Jayanti prayer meeting at the Town Hall. Jointly organized by the Mysuru District Administration and the City Corporation, the event commemorated the birth anniversary of Mahatma Gandhi. Highlighting the timeless relevance of Gandhian principles, the Minister emphasized integrating truth, non-violence, and humanitarianism into public service. He reiterated that decentralized, community-focused development is the truest tribute to Gandhiji’s vision for India.
Keywords
Gandhiji, principles, Minister, Yathindra Siddaramaiah, Mysore