Friday, October 2, 2026

BDA Apartments

Home Front Page ನೈಸ್ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ SIR ನಾಟಕ- ಕೇಂದ್ರ ಸಚಿವ HDK

ನೈಸ್ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ SIR ನಾಟಕ- ಕೇಂದ್ರ ಸಚಿವ HDK

ಬೆಂಗಳೂರು,ಅಕ್ಟೋಬರ್,2,2026 (www.justkannada.in): ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ   ಇದರ ಗಮನವನ್ನು ಬೇರೆಡೆಗೆ ತಿರುಗಿಸಲು ಕಾಂಗ್ರೆಸ್ ಎಸ್​ಐಆರ್ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿಕೆ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ಆರಂಭದಲ್ಲೇ ವ್ಯಾಪಕ ಅಕ್ರಮ ಎಸಗಿದ ಕಾಂಗ್ರೆಸ್, ಈಗ ಅದರ ವಿರುದ್ಧವೇ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಲ್ಲಿ ಜನರನ್ನು ಸೇರಿಸಿ ಕಾಂಗ್ರೆಸ್‌ನವರೇ ಅಕ್ರಮ ಎಸಗಿತ್ತು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ಎನ್‌ಡಿಎ ದೂರು ನೀಡಿದೆ ಎಂದರು.Congress hdk hdk 1

ಈ ಮಧ್ಯೆ ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲಷ್ಟೇ ರಾಜ್ಯ ಕಾಂಗ್ರೆಸ್ ನಾಯಕರು ಈ ಪ್ರತಿಭಟನೆಯ ಪ್ರಹಸನ ಆರಂಭಿಸಿದ್ದಾರೆ. ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ನಾನು ದಾಖಲೆ ಸಮೇತ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿಗಳು ಈ ಎಸ್‌ಐಆರ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.Congress jk02_new jk02 new

 

English Summary
Title

HDK Slams Congress SIR Drama: Accuses Karnataka Govt of Diverting Attention from ₹3-Lakh Crore NICE Scam

Short Description
Union Minister H.D. Kumaraswamy (HDK) has accused the Congress government in Karnataka of staging a "drama" over the Special Intensive Revision (SIR) of electoral rolls. Kumaraswamy alleged that the recent street protests by Congress leaders are a calculated move to divert attention from the massive NICE project scam, which he values at ₹3-lakh crore. Targeting D.K. Shivakumar, HDK claimed that the ruling party is shielding corrupt contractors and trying to bury major land irregularities. Meanwhile, Congress has rubbished the claims, maintaining their protests target voter list tampering.
Keywords
Congress, SIR, drama, divert attention, NICE scam, Union Minister, HDK