Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Front Page ಮಿಸ್ಟರ್‌ ಡಿಕೆ ಶಿವಕುಮಾರ್‌, ಗೂಂಡಾಗಿರಿ ಬಿಡಿ- ಸಚಿವ ಅಶ್ವಥ್ ನಾರಾಯಣ್  ಕಿಡಿ

ಮಿಸ್ಟರ್‌ ಡಿಕೆ ಶಿವಕುಮಾರ್‌, ಗೂಂಡಾಗಿರಿ ಬಿಡಿ- ಸಚಿವ ಅಶ್ವಥ್ ನಾರಾಯಣ್  ಕಿಡಿ

ಬೆಂಗಳೂರು,ಜನವರಿ,22,2022(www.justkannada.in):  ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ನಿನ್ನೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರಕ್ಕೂ ಅಶ್ವತ್ ನಾರಾಯಣ್ ಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಚಿವ ಅಶ್ವಥ್ ನಾರಾಯಣ್ ಅವರೇ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ್,  ರಾಮನಗರಕ್ಕೂ ನನಗೂ ಏನು ಸಂಬಂಧ ಎಂದು ಕೇಳುವ ಡಿಕೆ ಶಿವಕುಮಾರ್‌ ಅವರ ಪ್ರಶ್ನೆಗೆ ಚಿಕ್ಕಕಲ್ಯ ನಾರಾಯಣಪ್ಪ ಅಶ್ವಥ್‌ ನಾರಾಯಣ್‌ ಎಂಬ ನನ್ನ ಪೂರ್ಣ ಹೆಸರನ್ನು ನೆನಪಿಸಬೇಕಿದೆ ಎಂದು ಟಾಂಗ್ ನೀಡಿದ್ದಾರೆ.

ಮಿಸ್ಟರ್‌ ಡಿಕೆ ಶಿವಕುಮಾರ್‌, ಗೂಂಡಾಗಿರಿ ಬಿಡಿ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ ಎಂದು ಹರಿಹಾಯ್ದಿರುವ ಅಶ್ವಥ್ ನಾರಾಯಣ್, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಹೇಳಿರುವಂತೆ ಡಿಕೆ ಬ್ರದರ್ಸ್‌ಗಳಿಗೆ ಅಭದ್ರತೆ ಕಾಡುತ್ತಿದೆ. ಗೂಂಡಾಗಳನ್ನು ಕಟ್ಟಿ ಮೆರೆದವರನ್ನು ಮರೆಯಾಗಿಸುವ ಕಲೆ ನಮ್ಮ ರಾಮನಗರದ ಜನತೆಗೆ ಗೊತ್ತಿದೆ. ಇಲ್ಲಿ ಅಭಿವೃದ್ಧಿಗೆ ಮಾತ್ರ ಬೆಲೆ. ಹಾದಿ ತಪ್ಪಿದ ರಾಜಕಾರಣಿಗಳಿಂದ ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವುದು ಬೇಡ ಎಂದು ಹೇಳಿದ್ದಾರೆ.

Key words: Mr. DK Shivakumar-Gundagiri –Leave- Minister -Ashwath Narayan