Monday, August 24, 2026

BDA Apartments

Home Front Page ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಸೃಷ್ಟಿ ಮಾಡಿದ ಭ್ರಮೆ ಅಷ್ಟೇ- ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್...

ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಸೃಷ್ಟಿ ಮಾಡಿದ ಭ್ರಮೆ ಅಷ್ಟೇ- ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಹುಬ್ಬಳ್ಳಿ,ಡಿಸೆಂಬರ್,28,2021(www.justkannada.in):  ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಅದು ಕಾಂಗ್ರೆಸ್ ಸೃಷ್ಟಿ ಮಾಡಿದ ಭ್ರಮೆ ಅಷ್ಟೇ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ  ಈ ಕುರಿತು ಮಾತನಾಡಿದ ಅರುಣ್ ಸಿಂಗ್,ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತ ಸಂತೃಪ್ತಿ ತಂದಿದೆ. ತುಂಬಾ ಸರಳ ಸಜ್ಜನ ವ್ಯಕ್ತಿ ಅವರು. ರೈತರಿಗೆ, ಅವರ ಮಕ್ಕಳಿಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ, ಬಡವರಿಗೆ ಮನೆ ನಿರ್ಮಾಣ, ಪ್ರವಾಹ ಪರಿಸ್ಥಿತಿಯಲ್ಲಿ ಖುದ್ದಾಗಿ ನಿರ್ವಹಣೆ ಮಾಡಿದ ಕಾರ್ಯ ಪ್ರಶಂಸನಾರ್ಹ ಎಂದು ಹೊಗಳಿದರು.

ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಅರುಣ್ ಸಿಂಗ್,  ಹಿಂದಿನ ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರ ದಿಂದ ಮುಳುಗಿತ್ತು. ನಮ್ಮ ನಿಷ್ಕಳಂಕ ಸರಕಾರದ ಮೇಲೆ 40%ಸರ್ಕಾರ ಅಂತ ಆಧಾರರಹಿತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅಪ್ಪಟ ಹಿಂದೂ ವಿರೋಧಿ. ಕುತಂತ್ರ ಮಾಡೋದು, ಸಿಡಿ ತಯಾರು ಮಾಡೋದು ಕಾಂಗ್ರೆಸ್ ಕೆಲ್ಸ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚಿಗೆ ತಲೆ ಕೆಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

Key words: illusion -created – Congress- about – CM change-Arun Singh