Monday, September 28, 2026

BDA Apartments

ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಿಸಿಕೊಳ್ಳಬೇಕು ಎಂದ ಮಾಜಿ ಸಚಿವ ಇಕ್ಬಾ...
Home Front Page ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಿಸಿಕೊಳ್ಳಬೇಕು ಎಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ.

ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಿಸಿಕೊಳ್ಳಬೇಕು ಎಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ.

ಕೊಪ್ಪಳ,ನವೆಂಬರ್,16,2021(www.justkannada.in):  ಬಿಟ್ ಕಾಯಿನ್  ದಂಧೆ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ಮಾತಿನ ಸಮರವೇ ನಡೆಯುತ್ತಿದ್ದು ಈ ಮಧ್ಯೆ  ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೆಸರಿನ ಬಗ್ಗೆ ವ್ಯಂಗ್ಯವಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಗಂಗಾವತಿಯಲ್ಲಿ ಮಾತನಾಡಿರುವ ಇಕ್ಬಾಲ್ ಅನ್ಸಾರಿ, ಪ್ರತಾಪ್ ಸಿಂಹ ಗಂಡೋ ಹೆಣ್ಣೋ ಚೆಕ್ ಮಾಡಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಹೆಸರಿನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿರುವುದು ಖಂಡನೀಯ. ಪ್ರತಾಪ್ ಸಿಂಹ ಸಂಸದರಾಗಲು ಲಾಯಕ್ಕಿಲ್ಲ. ಯಾವುದೋ ಅಲೆಯಲ್ಲಿ ಆತನಿಗೆ ಜನರು ವೋಟ್ ಹಾಕಿದ್ದಾರೆ. ಆತನದು ಝಿರೋ ಟ್ಯಾಂಲೆಂಟ್ ಎಂದು ಕಿಡಿಕಾರಿದ್ದಾರೆ.

ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿದ್ದಕ್ಕೆ ಪ್ರತಾಪ್ ಸಿಂಹ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೇ ಹೋರಾಟ ಮಾಡಲಾಗುವುದು.  ಬಿಟ್ ಕಾಯಿನ್ ಹಗರಣ ಇಂದು ಅಂತರಾಷ್ಟ್ರೀಯ ಮಟ್ಟದ ಹಗರಣವಾಗಿದೆ. ಇದರಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ತನಿಖಾ ಸಂಸ್ಥೆಯನ್ನೇ ಡೈವರ್ಟ್ ಮಾಡಲು ಬಿಜೆಪಿ ಯತ್ನಿಸಿದೆ ಎಂದು ಇಕ್ಬಾಲ್ ಅನ್ಸಾರಿ ಆರೋಪಿಸಿದರು.

Key words: Former minister- Iqbal Ansari – Pratap simha- checked.