Tuesday, September 29, 2026

BDA Apartments

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ‘ಕೈ’ ಶಾಸಕ ಶ್ರೀನಿವಾಸ್ ಮಾನೆ BDA JK_Adv BDA Adv
Home Front Page ಸಿಎಂ ಬೊಮ್ಮಾಯಿ ಭೇಟಿ ಮಾಡಿದ ‘ಕೈ’ ಶಾಸಕ ಶ್ರೀನಿವಾಸ್ ಮಾನೆ.

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ‘ಕೈ’ ಶಾಸಕ ಶ್ರೀನಿವಾಸ್ ಮಾನೆ.

ಬೆಂಗಳೂರು,ನವೆಂಬರ್,16,2021(www.justkannada.in):  ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ಧು ಶಾಸಕರಾಗಿರುವ ಶ್ರೀನಿವಾಸ್ ಮಾನೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾದರು.

ಬೆಂಗಳೂರಿನ ಆರ್.ಟಿ ನಗರದ ಸಿಎಂ ನಿವಾಸಕ್ಕೆ ಭೇಟಿ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶ್ರೀನಿವಾಸ್ ಮಾನೆ, ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ರಾಜಕಾರಣವೇ ಬೇರೆ ಆಡಳಿತವೇ ಬೇರೆ. ನಾನು ಗೌರವಿಸುವ ವ್ಯಕ್ತಿಯಲ್ಲಿ ಸಿಎಂ ಕೂಡ ಒಬ್ಬರು. ಬಿಟ್ ಕಾಯಿನ್ ವಿಚಾರ ಮತ್ತು ನನ್ನ ಭೇಟಿಗೂ ಯಾವುದೇ ಸಂಬಂಧವಿಲ್ಲ. ಕ್ಷೇತ್ರದ ಅಭಿವೃದ್ಧಿ ಸಂಬಂಧ ಭೇಟಿಯಾಗಿದ್ದೇನೆ. ಸಿಎಂ ಭೇಟಿಯಾಗುವುದು ಶಾಸಕರ ಕರ್ತವ್ಯ ಎಂದು ನುಡಿದರು.

Key words:  MLA-Srinivas Mane-met –CM-Bommai