Tuesday, September 22, 2026

BDA Apartments

ನಟ ಪುನೀತ್ ರಾಜಕುಮಾರ್ ಹಠಾತ್ ಸಾವಿನ ಕುರಿತು ತನಿಖೆಗೆ ಆದೇಶಿಸುವಂತೆ ಅಯೂಬ್ ...
Home Cinema ನಟ ಪುನೀತ್ ರಾಜಕುಮಾರ್ ಹಠಾತ್ ಸಾವಿನ ಕುರಿತು ತನಿಖೆಗೆ ಆದೇಶಿಸುವಂತೆ ಅಯೂಬ್ ಖಾನ್ ಆಗ್ರಹ.

ನಟ ಪುನೀತ್ ರಾಜಕುಮಾರ್ ಹಠಾತ್ ಸಾವಿನ ಕುರಿತು ತನಿಖೆಗೆ ಆದೇಶಿಸುವಂತೆ ಅಯೂಬ್ ಖಾನ್ ಆಗ್ರಹ.

ಮೈಸೂರು,ಅಕ್ಟೋಬರ್,30,2021(www.justkannada.in):  ನಟ ಪುನೀತ್ ರಾಜಕುಮಾರ್ ಹಠಾತ್ ಸಾವಿನ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಬೇಕು ಎಂದು ಹೊಸ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಆಗ್ರಹಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯೂಬ್ ಖಾನ್ , ಪುನೀತ್ ರಾಜಕುಮಾರ್ ಸಾವಿಗೆ ನಿಖರ ಕಾರಣವೇನೆಂಬ ಸತ್ಯಾಂಶವನ್ನು ಸರ್ಕಾರ ಬಹಿರಂಗಪಡಿಸಬೇಕು. ನಟ ಪುನೀತ್ ರಾಜಕುಮಾರ್ ಹಠಾತ್ ಸಾವನ್ನಪ್ಪಿರುವುದು ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಲಭ್ಯವಿರುವ ಪ್ರಸ್ತುತ ಸನ್ನಿವೇಶದಲ್ಲಿ ಒಬ್ಬ ಮಹಾನ್ ನಟ ಏಕಾಏಕಿ ಸಾವನ್ನಪ್ಪಿರುವುದನ್ನು ನಂಬಲಾಗುತ್ತಿಲ್ಲ.

ವೈದ್ಯರ ನಿರ್ಲಕ್ಷದಿಂದಲೇ ಪುನೀತ್ ರಾಜಕುಮಾರ್ ಸಾವನ್ನಪ್ಪಿರುವ ಸಾಧ್ಯತೆಯಿದೆ. ಇದು ವೈದ್ಯಕೀಯ ಕ್ಷೇತ್ರದ ವೈಫಲ್ಯವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಬೇಕು. ಪುನೀತ್ ರಾಜಕುಮಾರ್ ರವರ ಹಠಾತ್ ಸಾವಿನ ಸತ್ಯಾಂಶವನ್ನು ರಾಜ್ಯದ ಜನರಿಗೆ ಬಹಿರಂಗ ಪಡಿಸಬೇಕು ಎಂದು  ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್  ಆಗ್ರಹಿಸಿದ್ಧಾರೆ.

Key words: mysore- Ayub Khan – Investigation – actor- Punith rajkumar- death