Sunday, August 23, 2026

BDA Apartments

Home Front Page ಪಾಕಿಸ್ತಾನ ಟಿ-20 ವಿಶ್ವಕಪ್ ಗೆಲ್ಲಬಹುದು ಎಂದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ !

ಪಾಕಿಸ್ತಾನ ಟಿ-20 ವಿಶ್ವಕಪ್ ಗೆಲ್ಲಬಹುದು ಎಂದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ !

ಬೆಂಗಳೂರು, ಅಕ್ಟೋಬರ್ 28, 2021 (www.justkannada.in):  ವಿಶ್ವಕಪ್ ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿರುವ ಪಾಕಿಸ್ತಾನ ತಂಡ ಈ ಬಾರಿಯ ಚಾಂಪಿಯನ್ ಆಗಬಹುದು ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭವಿಷ್ಯ ನುಡಿದಿದ್ದಾರೆ.

ಈ ಬಾರಿಯ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಪಾಕ್ ಮುಂಚೂಣಿಯಲ್ಲಿದೆ ಎಂದು ಕೀವಿಸ್ ನಾಯಕ ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ ಭರ್ಜರಿ ಜಯ ಗಳಿಸಿದೆ. ಸ್ವತಃ ನಾಯಕ ಬಾಬರ್ ಅಜಮ್ ಅದ್ಭುತ ಫಾರ್ಮ್ ನಲ್ಲಿರುವುದು ಪಾಕ್ ತಂಡದ ಪ್ರಮುಖ ಶಕ್ತಿಯಾಗಿದೆ.
ಪಾಕ್ ಬೌಲರ್ ಗಳ ಜತೆಗೆ ಬ್ಯಾಟರ್ ಗಳೂ ಮಿಂಚುತ್ತಿರುವುದು ಗಮನಾರ್ಹವಾಗಿದೆ.