Tuesday, September 22, 2026

BDA Apartments

ಮೈಸೂರು ಅನಂತಸ್ವಾಮಿ ಸಂಯೋಜನೆಯ ನಾಡಗೀತೆಯನ್ನು ಕರ್ನಾಟಕದ ಅಧಿಕೃತ ನಾಡಗೀತೆ...
Home Front Page ಮೈಸೂರು ಅನಂತಸ್ವಾಮಿ ಸಂಯೋಜನೆಯ ನಾಡಗೀತೆಯನ್ನು ಕರ್ನಾಟಕದ ಅಧಿಕೃತ ನಾಡಗೀತೆಯನ್ನಾಗಿ ಮಾಡುವಂತೆ ಸರ್ಕಾರಕ್ಕೆ ಮನವಿ.

ಮೈಸೂರು ಅನಂತಸ್ವಾಮಿ ಸಂಯೋಜನೆಯ ನಾಡಗೀತೆಯನ್ನು ಕರ್ನಾಟಕದ ಅಧಿಕೃತ ನಾಡಗೀತೆಯನ್ನಾಗಿ ಮಾಡುವಂತೆ ಸರ್ಕಾರಕ್ಕೆ ಮನವಿ.

ಮೈಸೂರು,ಅಕ್ಟೋಬರ್,26,2021(www.justkannada.in):  ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ನಾಡಗೀತೆಯನ್ನು ಕರ್ನಾಟಕದ ಅಧಿಕೃತ ನಾಡಗೀತೆಯನ್ನಾಗಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ  ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ಮನವಿ ಮಾಡಿದೆ.

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು 60 ವರ್ಷಗಳ ಹಿಂದ ಮೈಸೂರು ಅನಂತಸ್ವಾಮಿಯವರು ಸಂಯೋಜನೆ ಮಾಡಿದ್ದು ಈಗಾಗಲೇ ಸರ್ಕಾರದ ಕಾರ್ಯಕ್ರಮಗಳಲ್ಲಿ ಈ ಸಂಯೋಜನೆಯ ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ” ಹಾಡನ್ನು ಹಾಡುತ್ತಿದ್ದಾರೆ.

ಈ ಗೀತೆಯು ಸರ್ಕಾರ ನಿಗದಿತ ಸಮಯದಲ್ಲಿ ರೂಪಿಸಲಾಗಿದ್ದು ನಾಡಗೀತೆಯ ಸಾಹಿತ್ಯಕ್ಕೆ ಭಾವಪೂರ್ಣ ಹಾಗೂ ಅರ್ಥಗರ್ಭಿತವಾಗಿ  ಸಂಯೋಜನೆ ಮಾಡಲಾಗಿದೆ , ಆದ್ದರಿಂದ ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ಗೀತೆಯನ್ನು ಕರ್ನಾಟಕ ರಾಜ್ಯದಿಂದ ನಾಡಗೀತೆಯನ್ನಾಗಿ ಸರ್ಕಾರವು ಪರಿಗಣಿಸಬೇಕು ಹಾಗೂ ಅಧಿಕೃತವಾಗಿ ಘೋಷಣೆ ಮಾಡಬೇಕು.

“ಜಯ ಭಾರತ ಜನನಿಯ ತನುಜಾತೆ”  ಗೀತೆಯನ್ನು ಕರ್ನಾಟಕ ಸರ್ಕಾರವು ನಮ್ಮ ಕರ್ನಾಟಕ ರಾಜ್ಯದ ನಾಡಗೀತೆಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಬೇಕು. ಈ ಮೂಲಕ ಸುಗಮ ಸಂಗೀತ ದೊರೆ ಎಂದೆ ಪ್ರಖ್ಯಾತವಾಗಿರುವ ನಮ್ಮ ಮೈಸೂರು ಅನಂತಸ್ವಾಮಿ ರವರಿಗೆ ಗೌರವ ಸಲ್ಲಿಸಬೇಕು ಎಂದು ಮೈಸೂರು ಅನಂತಸ್ವಾಮಿ ಅವರ ಹುಟ್ಟುಹಬ್ಬದ ದಿನದಂದು ಸರ್ಕಾರಕ್ಕೆ ಈ ಮನವಿ ಸಲ್ಲಿಸುತ್ತಿದ್ದೇವೆ ಎಂದು ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದಾರೆ.

Key words: Mysore -appeals – government – Karnataka -official – Anthem-mysore Anandaswamy -composition.