Saturday, October 10, 2026

BDA Apartments

ನಾವು ಯಾರ ಪರವೂ ಅಲ್ಲ, ನ್ಯಾಯದ ಪರ- ಡಿಸಿಎಂ ಡಿಕೆ ಶಿವಕುಮಾರ್ BDA JK_Adv BDA Adv
Home Front Page ಜಾತಿ ವಿಭಜಕ ಸಿದ್ದರಾಮಯ್ಯ: ಟ್ವಿಟ್ಟರ್’ನಲ್ಲಿ ಬಿಜೆಪಿ ‘ಸರಣಿ ಟೀಕಾಸ್ತ್ರ’

ಜಾತಿ ವಿಭಜಕ ಸಿದ್ದರಾಮಯ್ಯ: ಟ್ವಿಟ್ಟರ್’ನಲ್ಲಿ ಬಿಜೆಪಿ ‘ಸರಣಿ ಟೀಕಾಸ್ತ್ರ’

ಬೆಂಗಳೂರು, ಅಕ್ಟೋಬರ್ 25, 2021 (www.justkannada.in): ಸಮಾಜ ಒಡೆಯುವಲ್ಲಿ ನಿಮಗಿಂತ ನಿಷ್ಠಾತರು ಬೇರೆ ಇಲ್ಲ, ‘ಜಾತಿ ವಿಭಜಕ ಸಿದ್ದರಾಮಯ್ಯ’ ಎಂದು ಬಿಜೆಪಿ ಕಿಡಿಕಾರಿದೆ.

ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿರುವ ಬಿಜೆಪಿ, ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ಹುಡುಕಿದವರು ಸಿದ್ದರಾಮಯ್ಯ, ವೀರಶೈವ, ಲಿಂಗಾಯಿತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿದ್ದೀರಿ? ಜಾತಿವಿಭಜಕ ಸಿದ್ದರಾಮಯ್ಯ ಎಂದು ಪ್ರಶ್ನಿಸಿದೆ.

ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ರಾಜಕೀಯ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯಗಿಂತ ನಿಷ್ಠಾತರು ಬೇರೆ ಇಲ್ಲ ಎಂದು ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ. ನಿಜವಾಗಿ ಸಿದ್ದರಾಮಯ್ಯ ಜಾತ್ಯಾತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಜಾತಿ, ಉಪಜಾತಿ ಒಡೆಯುವ ಕೆಲಸದಲ್ಲಿ ತೊಡಗಿರುವುದೇ ಸಿದ್ದರಾಮಯ್ಯ ಎಂದು ಗುಡುಗಿದೆ.