Monday, September 28, 2026

BDA Apartments

ನಾಡಗೀತೆ ಅವಧಿ ಕಡಿತ ವಿಚಾರ: ಚುನಾವಣೆ ಬಳಿಕ ಅಂತಿಮ ನಿರ್ಧಾರ ಪ್ರಕಟ- ಸಚಿವ ಸುನ...
Home Front Page ನಾಡಗೀತೆ ಅವಧಿ ಕಡಿತ ವಿಚಾರ: ಚುನಾವಣೆ ಬಳಿಕ ಅಂತಿಮ ನಿರ್ಧಾರ ಪ್ರಕಟ- ಸಚಿವ ಸುನೀಲ್ ಕುಮಾರ್

ನಾಡಗೀತೆ ಅವಧಿ ಕಡಿತ ವಿಚಾರ: ಚುನಾವಣೆ ಬಳಿಕ ಅಂತಿಮ ನಿರ್ಧಾರ ಪ್ರಕಟ- ಸಚಿವ ಸುನೀಲ್ ಕುಮಾರ್

ಬೆಂಗಳೂರು,ಅಕ್ಟೋಬರ್,24,2021(www.justkannada.in): ನಾಡಗೀತೆ ಅವಧಿ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಉಪಚುನಾವಣೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸುನೀಲ್ ಕುಮಾರ್, ನಾಡಗೀತೆ ಅವಧಿ ಕಡಿತ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ವರದಿಯನ್ನ ಸಿಎಂಗೆ ನೀಡಲಾಗಿದೆ.  ಸದ್ಯ ಚುನಾವಣಾ ನೀತಿ ಸಂಹಿತೆ ಇದೆ. ಹೀಗಾಗಿ ಅಂತಿಮ ತೀರ್ಮಾನ ಕೈಗೊಳ್ಳಲು ಆಗಿಲ್ಲ. ಚುನಾವಣೆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

ಮೆಟ್ರೋದಲ್ಲಿ ಕನ್ನಡ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಕಳೆದ ಬಾರಿ ವೈಪಲ್ಯ ಆಗಿತ್ತು. ಅಧಿಕಾರಿಗಳಿಗೆ ನೋಟೀಸ್ ನೀಡಿದ್ದೇವೆ. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದರು.

Key words: Think –nadageethe-time-  Final decision – announced- after –election-Minister -Sunil Kumar