Saturday, August 1, 2026

BDA Apartments

Home Front Page ವಿನಾಯಕ ಬಾಳಿಗ ಹತ್ಯೆಯಲ್ಲಿ  ನಳೀನ್ ಕುಮಾರ್ ಕಟೀಲ್ ಕೈವಾಡವೂ ಇದೆ-ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ.

ವಿನಾಯಕ ಬಾಳಿಗ ಹತ್ಯೆಯಲ್ಲಿ  ನಳೀನ್ ಕುಮಾರ್ ಕಟೀಲ್ ಕೈವಾಡವೂ ಇದೆ-ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ.

ಮೈಸೂರು,ಅಕ್ಟೋಬರ್,20,2021(www.justkannada.in): ವಿನಾಯಕ ಬಾಳಿಗ ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈನ ಖಾಸಾ ದೋಸ್ತ್ ನಳೀನ್ ಕುಮಾರ್ ಕಟೀಲ್. ವಿನಾಯಕ ಬಾಳಿಗ ಹತ್ಯೆಯಲ್ಲಿ ಕಟೀಲ್ ಕೈವಾಡವೂ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ ಕಾಗ್ರೆಸ್ ಮೈಸೂರು ಕಾಂಗ್ರೆಸ್ ಮುಖಂಡರು  ನಗರದ ಕಾಂಗ್ರೆಸ್ ಕಚೇರಿ ಮುಂದೆ ನಳೀನ್ ಕುಮಾರ್ ಕಟೀಲ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಸೇರಿ ಮತ್ತಿತರರ ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಂ.ಲಕ್ಷ್ಮಣ್, ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದು ಮಾತಾಡಬೇಕು. ಕಾಂಗ್ರೆಸ್ ನ ವೈಫಲ್ಯ ಪ್ರಸ್ತಾಪಿಸಿ‌, ನಿಮ್ಮ ಸಾಧನೆಗಳನ್ನು ತಿಳಿಸಿ. ನಾವು ಬೇಕಾದರೆ ಬಹಿರಂಗ ಚರ್ಚೆಗೆ ಬರುತ್ತೇವೆ.ಕೇವಲ ಊಹೆ, ಕಾಲ್ಪನಿಕ ಆಧಾರದ ಮೇಲೆ ತೇಜೋವಧೆ ಮಾಡಬೇಡಿ. ಕೇವಲ ಪ್ರಚಾರಕ್ಕೋಸ್ಕರ ಹೇಳಿಕೆಗಳನ್ನು ನೀಡಬೇಡಿ. ಇದೇ ರೀತಿ ಮುಂದುವರಿದರೆ ನಿಮ್ಮ ಮನೆ ಮತ್ತು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ. ನಳಿನ್ ಕುಮಾರ್ ಕಟೀಲ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Key words: Nalin Kumar Kateel – Vinayaka baliga- murder-KPCC spokesperson -M Laxman