Tuesday, September 15, 2026

BDA Apartments

ಸ್ಪೆಷಲ್ ವಿಡೀಯೋ ರಿಲೀಸ್ ಮಾಡಿ ದಚ್ಚು ಫ್ಲಾನ್ಸ್ ! BDA JK_Adv BDA Adv
Home Cinema ಸ್ಪೆಷಲ್ ವಿಡೀಯೋ ರಿಲೀಸ್ ಮಾಡಿ ದಚ್ಚು ಫ್ಲಾನ್ಸ್ !

ಸ್ಪೆಷಲ್ ವಿಡೀಯೋ ರಿಲೀಸ್ ಮಾಡಿ ದಚ್ಚು ಫ್ಲಾನ್ಸ್ !

ಮೈಸೂರು, ಜುಲೈ 22, 2019 (www.justkannada.in):  ದರ್ಶನ್ ಅಭಿಮಾನಿಗಳು ಡಿ ಬಾಸ್ ದರ್ಶನ್‌ಗೆ ಸೇರಿದ ವೀಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ದಮ್ಮನಕಟ್ಟೆ, ಕಬಿನಿ ಹಿನ್ನೀರು, ಬಳ್ಳೆ ಶಿಬಿರ ವ್ಯಾಪ್ತಿಯಲ್ಲಿ ನಟ ದರ್ಶನ್ ಸಂಚರಿಸಿ ಅಲ್ಲಿನ ಫೋಟೋ, ವೀಡಿಯೋಗಳನ್ನ ಸೆರೆಹಿಡಿದಿದ್ದರು.

ಈ ವೀಡಿಯೋ, ಫೋಟೋವನ್ನು ಬಳಸಿ, ದರ್ಶನ್ ಅಭಿಮಾನಿಗಳು ಸಾಕ್ಷ್ಯ ಚಿತ್ರ ಮಾಡಿದ್ದರು.ಈ ಸಾಕ್ಷ್ಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ವೀಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ.

ಸಫಾರಿ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಡಿನ ಮಕ್ಕಳೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದರು. ಗಜ ಪಡೆ ಕ್ಯಾಪ್ಟನ್ ಅರ್ಜುನ, ಹುಲಿ, ಕರಡಿ, ಚಿರತೆ, ಸೇರಿದಂತೆ ಕಾಡು ಪ್ರಾಣಿ ಪಕ್ಷಿಗಳ ಫೋಟೋ ದರ್ಶನ್ ಕ್ಯಾಮರಾದಲ್ಲಿ ಸೆರೆಯಾಗಿತ್ತು.