ಇಂದು ವಿಶ್ವಾಸಮತಯಾಚನೆ ಆಗುತ್ತಾ..? ಸ್ಪೀಕರ್ ರಮೇಶ್ ಕುಮಾರ್ ಏನಂದ್ರು ಗೊತ್ತೆ..?

ಬೆಂಗಳೂರು,ಜು,22,2019(www.justkannada.in): ಶತಾಯಗತಾಯ ಇಂದೇ ವಿಶ್ವಾಸಮತಯಾಚನೆ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್,  ವಿಶ್ವಾಸಮತಯಾಚನೆ ಇಂದು ಮುಕ್ತಾಯ ಮಾಡುವುದಾಗಿ ಹೇಳಿದ್ದೇನೆ. ಸದನದಲ್ಲಿ ಕೇವಲ ಎರಡು ದಿನ ಮಾತ್ರ ಚರ್ಚೆಯಾಗಿದೆ. ವರ್ಷಾನುಗಟ್ಟಲೇ ಏನು ಚರ್ಚೆಯಾಗಿಲ್ಲ. ಕಾನೂನು ಗೊತ್ತಿಲ್ಲದವರು ಅದರ ಬಗ್ಗೆ ಮಾತನಾಡ್ತಾರೆ ಎಂದು ಟಾಂಗ್ ಕೊಟ್ಟರು.

ಹಾಗೆಯೇ ಕ್ರಮಬದ್ಧವಾಗಿ ರಾಜೀನಾಮೆ ನೀಡಿದವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಇಂದೇ ವಿಶ್ವಾಸಮತಯಾಚಿಸಲು ಸಿಎಂಗೆ ನಿರ್ದೇಶಿಸುವಂತೆ ಮನವಿ ಮಾಡಿ ಪಕ್ಷೇತರ ಶಾಸಕರಿಬ್ಬರು ಸಲ್ಲಿಸುವ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಕಳೆದ ಎರಡು ದಿನ ಸದನದಲ್ಲಿ ದೋಸ್ತಿ ಪಕ್ಷದ ಸದಸ್ಯರು ಚರ್ಚೆ ನಡೆಸಿದಂತೆ ಇಂದೂ ಸಹ ಚರ್ಚೆ ಮುಂದುವರೆಸುವರೇ ಇಂದಿನ ವಿಶ್ವಾಸಮತಯಾಚನೆ ನಾಳೆಗೆ ಮುಂದೂಡಿಕೆಯಾಗುತ್ತಾ ಎಂಬ ಬಗ್ಗೆ  ಕುತೂಹಲ ಉಂಟಾಗಿದೆ.

Key words: today-vote of confidence-Speaker- Ramesh Kumar-reaction