ಬೆಂಗಳೂರು,ಅಕ್ಟೋಬರ್,30,2026 (www.justkannada.in): ನವೆಂಬರ್ 1ರಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 8 ರೂಪಾಯಿ ಹೆಚ್ಚಳ ಮಾಡುವುದನ್ನು ಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ. ಪೆಟ್ರೋಲ್ ಡೀಸೆಲ್ ರೇಟ್ ರೀತಿ ಹಾಲಿನ ದರ ಜಾಸ್ತಿ ಆಗಿಲ್ಲ. ಬಹಳ ದಿನಗಳಿಂದ ನಂದಿನಿ ಹಾಲಿನ ದರ ಏರಿಕೆ ಆಗಿರಲಿಲ್ಲ ಹಾಲಿನ ದರ ಹೆಚ್ಚಿಸದ್ದಿದರಿಂದ ನಮ್ಮ ಹಾಲು ಬೇರೆಡೆ ಹೋಗುತ್ತಿದೆ. ತಮಿಳುನಾಡು ಆಂಧ್ರಕ್ಕೆ ಹಾಲು ಕಳುಹಿಸುತ್ತಿದ್ದರು. ನಂದಿನಿ ಹಾಲಿನ ದರ ಹೆಚ್ಚಸುವಂತೆ ರೈತರು ಹೋರಾಟ ಮಾಡಿದರು.
ಹಾಲಿನ ದರ ಏರಿಕೆಗಾಗಿ ಎಲ್ಲ ಶಾಸಕರು ಗಲಾಟೆ ಮಾಡುತ್ತಿದ್ದರು. ಹಾಲು ಒಕ್ಕೂಟಗಳು 12 ರೂ ಹೆಚ್ಚಳ ಮಾಡುವಂತೆ ಕೇಳಿದ್ದವು. ನಂತರ ಹಾಲು ಒಕ್ಕೂಟ ಜೊತೆ ಮಾತನಾಡಿ 8 ರೂ. ಹೆಚ್ಚಿಸಿದ್ದೇವೆ. ಹಾಲು ಒಕ್ಕೂಟಗಳಗೆ 1 ರೂ. ರೈತರಿಗೆ 7 ರೂ. ನೀಡುತ್ತೇವೆ. ಕೇಂದ್ರ ಏನು ಮಾಡುತ್ತಿದೆಯೋ ಅದನ್ನು ನಾವು ಫಾಲೋ ಮಾಡುತ್ತಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
Milk, price, hike, CM, DK Shivakumar, defend , move







