Tuesday, August 4, 2026

BDA Apartments

Home Cinema ಆರ್’ಆರ್’ಆರ್ ಸಿನಿಮಾ ರಿಲೀಸ್ ಮತ್ತೆ ಮುಂದಕ್ಕೆ

ಆರ್’ಆರ್’ಆರ್ ಸಿನಿಮಾ ರಿಲೀಸ್ ಮತ್ತೆ ಮುಂದಕ್ಕೆ

ಬೆಂಗಳೂರು, ಸೆಪ್ಟೆಂಬರ್ 13, 2021 (www.justkannada.in): ತ್ರಿಬಲ್ ಆರ್ ಸಿನಿಮಾ ರಿಲೀಸ್ ಡೇಟ್ ಅನ್ನು ಮತ್ತೆ ಮುಂದೂಡಲಾಗಿದೆ.

ಜ್ಯೂನಿಯರ್ ಎನ್ ಟಿಆರ್, ರಾಮ್ ಚರಣ್ ಅಭಿನಯಿಸಿರುವ ಬಹುನಿರೀಕ್ಷಿತ ತ್ರಿಬಲ್ ಆರ್ ಸಿನಿಮಾ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತದೆ ಎಂದು ಈ ಮೊದಲು ಘೋಷಣೆಯಾಗಿತ್ತು.

ಕೊರೋನಾದಿಂದಾಗಿ ಇನ್ನೂ ಥಿಯೇಟರ್ ಗಳು ಮೊದಲಿನಂತೆ ತೆರೆಯಲು ಅನುಮತಿ ಸಿಕ್ಕಿಲ್ಲ. ಹೀಗಾಗಿ ಸಿನಿಮಾ ರಿಲೀಸ್ ಅನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ.

ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾದ ಹೊಸ ರಿಲೀಸ್ ಡೇಟ್ ಯಾವಾಗ ಎಂದು ಚಿತ್ರತಂಡ ನಿರ್ಧರಿಸಿಬೇಕಿದೆ. ಆದರೆ ಕೊರೊನಾ ಕಾರಣದಿಂದಾಗಿ ರಿಲೀಸ್ ಗೆ ಇನ್ನೂ ಸಾಕಷ್ಟು ದಿನ ಕಾಯಬೇಕಾಗಿದೆ.

key words: RRR Cinema Release date again postponed