Monday, October 19, 2026

Dasara Wishes

Happy Dasara
Home Front Page ಪೆಟ್ರೋಲ್ ಬೆಲೆ ಕಡಿಮೆ ಆಯ್ತು! ಅದೂ ಲೀಟರ್’ಗೆ ಬರೋಬ್ಬರಿ 20 ಪೈಸೆ!!

ಪೆಟ್ರೋಲ್ ಬೆಲೆ ಕಡಿಮೆ ಆಯ್ತು! ಅದೂ ಲೀಟರ್’ಗೆ ಬರೋಬ್ಬರಿ 20 ಪೈಸೆ!!

ಬೆಂಗಳೂರು, ಆಗಸ್ಟ್ 22, 2021 (www.justkannada.in):  ಸಾಕಷ್ಟು ತಿಂಗಳ ಬಳಿಕ ಇಂದು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 20 ಪೈಸೆಯಷ್ಟು ಕಡಿತ ಮಾಡಲಾಗಿದೆ!

ಭಾನುವಾರ ಪೆಟ್ರೋಲ್ ಬೆಲೆ ಲೀಟರ್ಗೆ 15 ರಿಂದ 20 ಪೈಸೆ, ಡೀಸೆಲ್ ದರ 18 ರಿಂದ 20 ಪೈಸೆಗಳಷ್ಟು ಕಡಿಮೆಯಾಗಿದೆ. 2021 ರ ಆಗಸ್ಟ್ 22 ರ ನಂತರದಲ್ಲಿ ದೇಶದಾದ್ಯಂತ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ.

ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 101.64 ರೂಪಾಯಿಯಾಗಿದ್ದು, ಡೀಸೆಲ್ಗೆ ಲೀಟರ್ಗೆ 89.07 ರೂ. ಇದೆ.

ಮುಂಬೈನಲ್ಲಿ ಪೆಟ್ರೋಲ್ ಲೀಟರ್ಗೆ 107.66 ರೂ. ಮತ್ತು ಡೀಸೆಲ್ಗೆ ಲೀಟರ್ಗೆ 96.64 ರೂ. ದರ ಇದೆ. ಬೆಂಗಳೂರಲ್ಲಿ ಪೆಟ್ರೋಲ್ 105 ರೂ., ಡೀಸೆಲ್ 94.29 ರೂ ಇದೆ.