Sunday, October 18, 2026

Dasara Wishes

Happy Dasara
Home Front Page ಮಕ್ಕಳಿಗೆ ನೋವಾಗದಂತೆ ಮೂರು ಡೋಸ್ ಕೋವಿಡ್ ಲಸಿಕೆ ನೀಡಲು ಸಿದ್ಧತೆ

ಮಕ್ಕಳಿಗೆ ನೋವಾಗದಂತೆ ಮೂರು ಡೋಸ್ ಕೋವಿಡ್ ಲಸಿಕೆ ನೀಡಲು ಸಿದ್ಧತೆ

ಬೆಂಗಳೂರು, ಆಗಸ್ಟ್ 22, 2021 (www.justkannada.in): 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಕೋವಿಡ್ ಲಸಿಕೆ ಝೈಕೋವ್ ಡಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಭಾರತೀಯ ಔಷಧಿ ನಿಯಂತ್ರಣ ಸಂಸ್ಥೆಯು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವದೇಶಿ ನಿರ್ಮಿತ ಝೈಕೋನ್ -ಡಿ ಲಸಿಕೆ ನೀಡಲು ಅನುಮೋದನೆ ನೀಡಿದೆ.

ಝೈಕೋವ್ ಡಿ ಲಸಿಕೆಯನ್ನು ಗುಜರಾತ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದು ದೇಶಾದ್ಯಂತ 50 ಕಡೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದೆ.

ಜುಲೈ1 ರಂದು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಡಿಸಿಜಿಐಯಿಂದ ಅನುಮೋದನೆ ಸಿಕ್ಕಿದೆ. ಇದೀಗ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ನಿಂದ ಒಪ್ಪಿಗೆ ಸಿಕ್ಕಿದೆ. ಮಕ್ಕಳಿಗೆ ನೋವಾಗದಂತೆ ಮೂರು ಡೋಸ್ ಲಸಿಕೆ ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.