Thursday, August 13, 2026

BDA Apartments

Home Front Page ಬೆಳಗಾವಿ ಸುವರ್ಣಸೌಧಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ: ವಿವಿಧ ಸಂಘಟನೆಗಳಿಂದ ಮನವಿ.

ಬೆಳಗಾವಿ ಸುವರ್ಣಸೌಧಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ: ವಿವಿಧ ಸಂಘಟನೆಗಳಿಂದ ಮನವಿ.

ಬೆಳಗಾವಿ,ಆಗಸ್ಟ್,21,2021(www,justkannada.in):   ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ  ಆಗಮಿಸಿರುವ ಬಸವರಾಜ ಬೊಮ್ಮಾಯಿ ಇಂದು ಸುವರ್ಣಸೌಧಕ್ಕೆ ಭೇಟಿ ನೀಡಿದ್ದಾರೆ.

ಸುವರ್ಣ ವಿಧಾನಸೌಧದ ಹೆಲಿಪ್ಯಾಡ್‌ಗೆ ಬಂದಿಳಿದ ಅವರನ್ನು ಪಕ್ಷದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬರಮಾಡಿಕೊಂಡರು. ಇದರೊಂದಿಗೆ ಈ ಹೆಲಿಪ್ಯಾಡ್ ಹಲವು ವರ್ಷಗಳ‌ ನಂತರ ಬಳಕೆ ಆದಂತಾಯಿತು.

ಸುವರ್ಣ ಸೌಧಕ್ಕೆ ಸಿಎಂ  ಬೊಮ್ಮಾಯಿ ಭೇಟಿ ನಿಡಿದ್ದು ಈ ವೇಳೆ ಕರವೇ ಮತ್ತು ರೈತಸಂಘಟನೆಗಳು ಸಿಎಂಗೆ ಮನವಿ ಸಲ್ಲಿಸಿವೆ. ಗಡಿ ಸಮಸ್ಯೆ ಕುರಿತು ಸುವರ್ಣಸೌಧದಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ಕರವೇ ಮನವಿ ಸಲ್ಲಿಸಿತು.

ಇನ್ನು ಸಂಪೂರ್ಣ ಸಾಲಮನ್ನಾ, ನೆರೆಹಾನಿ ಪರಿಹಾರವನ್ನ ನೀಡುವಂತೆ ವಿವಿಧ ರೈತಸಂಘಟನೆಗಳು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದವು.

Key words: CM -Basavaraja Bommai- visits -Belgaum -Suvarnasoudha.