ಬೆಂಗಳೂರಿನಲ್ಲಿ ರೌಡಿಸಂ ನಿಗ್ರಹ, ರಿಯಲ್ ಎಸ್ಟೇಟ್, ಡ್ರಗ್ಸ್ ​ಗೆ ಕಡಿವಾಣ ಹಾಕಲು ಸೂಚನೆ- ಗೃಹ ಸಚಿವ ಅರಗ ಜ್ಞಾನೇಂದ್ರ.

0
1

ಶಿವಮೊಗ್ಗ,ಆಗಸ್ಟ್,21,2021(www.justkannada.in):  ಬೆಂಗಳೂರಿನಲ್ಲಿ ರೌಡಿಸಂ ನಿಗ್ರಹಿಸಲು ಹಾಗೂ  ರಿಯಲ್ ಎಸ್ಟೇಟ್, ಡ್ರಗ್ಸ್ ​ಗೆ ಕಡಿವಾಣ ಹಾಕಲು  ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸೈಬರ್ ಕ್ರೈಂ ವಿಭಾಗ ಬಲಪಡಿಸಲು ಇನ್ಫೋಸಿಸ್​ ನೆರವು ನೀಡುತ್ತಿದೆ. ಭದ್ರಾವತಿ ಸೇರಿಸಿಕೊಂಡು ಶಿವಮೊಗ್ಗ ಕಮಿಷನರೇಟ್ ಸ್ಥಾಪನೆ ಮಾಡುತ್ತೇವೆ. ಕಮಿಷನರೇಟ್​ ಸ್ಥಾಪನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದರು.

 ಆಫ್ಘನ್​ನಲ್ಲಿ ಸಿಲುಕಿರುವ ನಾಗರಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು, ಅವರ ರಕ್ಷಣೆಗಾಗಿ ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್​ ನೇಮಕ ಮಾಡಿದ್ದೇವೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: Home Minister- Araga Jnanendra -instructed –rowdyism- real estate – drugs – Bangalore.