Saturday, August 15, 2026

BDA Apartments

Home Front Page ವಿಶ್ವಾಸಮತಯಾಚನೆ ವೇಳೆ ನನ್ನ ನಿರ್ಧಾರ ಪ್ರಕಟವಾಗುತ್ತೆ- ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಸ್ಪಷ್ಟನೆ….

ವಿಶ್ವಾಸಮತಯಾಚನೆ ವೇಳೆ ನನ್ನ ನಿರ್ಧಾರ ಪ್ರಕಟವಾಗುತ್ತೆ- ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಸ್ಪಷ್ಟನೆ….

ಬೆಂಗಳೂರು,ಜು,16,2019(www.justkannada.in): ವಿಶ್ವಾಸಮತಯಾಚನೆ ವೇಳೆ ನನ್ನ ಮುಂದಿನ ನಿರ್ಧಾರವನ್ನ ಪ್ರಕಟಿಸುತ್ತೇನೆ ಎಂದು ಕಾಂಗ್ರೆಸ್ ಅತೃಪ್ತ ಶಾಸಕ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ರಾಮಲಿಂಗರೆಡ್ಡಿ, ಗುರುವಾರ ಸದನಕ್ಕೆ ಹಾಜರಾಗುತ್ತೇನೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಿದರೇ ನಾನು ಪಾಲ್ಗೊಳ್ಳುತ್ತೇನೆ. ಅಂದೇ ನನ್ನ ಮುಂದಿನ ನಿರ್ಧಾರವನ್ನ ಪ್ರಕಟಿಸುತ್ತೇನೆ ಎಂದು ತಿಳಿಸಿದರು.

ರಾಮಲಿಂಗರೆಡ್ಡಿ ಅವರ ಹೇಳಿದಂತೆ ಕೇಳುತ್ತೇನೆ ಎಂದು ಬೆಂಗಳೂರು ಅತೃಪ್ತಶಾಸಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು,  ನಾನು ಸೀನಿಯರ್ ನನ್ನ ಮೇಲಿನ ಗೌರವದಿಂದ ಆ ರೀತಿ ಹೇಳಿದ್ದಾರೆ. ಮೂರು ದಿನಗಳ ಹಿಂದೆ ಮುಂಬೈನಲ್ಲಿದ್ದ ಶಾಸಕರೊಬ್ಬರು ಸಂಪರ್ಕಿಸಿದ್ದರು. ಅದನ್ನ ಬಿಟ್ಟು ಬೇರೆ ಯಾರೂ ನನ್ನನ್ನ ಸಂಪರ್ಕಿಸಿಲ್ಲ ಎಂದರು.

ನಿನ್ನೆ ಸ್ಪೀಕರ್ ಎದುರು ಹಾಜರಾಗದಿದ್ದಕ್ಕೆ ಸ್ಪಷ್ಟನೆ ನೀಡಿದ ಶಾಸಕ ರಾಮಲಿಂಗರೆಡ್ಡಿ,  ಕಣ್ಣಿನ ಸಮಸ್ಯೆಯಿಂದ ನಿನ್ನೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನ ಸ್ಪೀಕರ್ ಗೂ ತಿಳಿಸಿದ್ದೇನೆ ಎಂದರು.

Key words: My decision -Disgruntled –MLA- Ramalingareddy -bangalore