Sunday, September 20, 2026

BDA Apartments

ಲಂಕಾ ಕ್ರಿಕೆಟಿಗರಿಗೆ ಕೊರೊನಾ ಕಾಟ: ಟೀಂ ಇಂಡಿಯಾ ಸರಣಿ ಮುಂದೂಡಿಕೆ BDA JK_Adv BDA Adv
Home Front Page ಲಂಕಾ ಕ್ರಿಕೆಟಿಗರಿಗೆ ಕೊರೊನಾ ಕಾಟ: ಟೀಂ ಇಂಡಿಯಾ ಸರಣಿ ಮುಂದೂಡಿಕೆ

ಲಂಕಾ ಕ್ರಿಕೆಟಿಗರಿಗೆ ಕೊರೊನಾ ಕಾಟ: ಟೀಂ ಇಂಡಿಯಾ ಸರಣಿ ಮುಂದೂಡಿಕೆ

ಬೆಂಗಳೂರು, ಜುಲೈ 10, 2021 (www.justkannada.in): ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಸರಣಿ ದಿಡೀರ್ ಮುಂದೂಡಿಕೆಯಾಗಿದೆ.

ಜುಲೈ 13 ರಿಂದ ಆರಂಭವಾಗಬೇಕಿದ್ದ ಸೀಮಿತ ಓವರ್ ಗಳ ಸರಣಿಯನ್ನು ದಿಢೀರ್ ಆಗಿ ಮುಂದೂಡಲಾಗಿದೆ.

ಸರಣಿ ಆಡಲು ಈಗಾಗಲೇ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಲಂಕಾದಲ್ಲಿ ಬೀಡುಬಿಟ್ಟಿದೆ.

ಲಂಕಾ ಕ್ರಿಕೆಟ್ ತಂಡದಲ್ಲಿ ಕೊರೋನಾ ಪ್ರಕರಣಗಳು ಕಂಡುಬರುತ್ತಿರುವ ಹಿನ್ನಲೆಯಲ್ಲಿ ಸರಣಿ ಮುಂದೂಡಲಾಗಿದೆ.

ಜುಲೈ 17 ರಿಂದ ಸರಣಿ ಆರಂಭವಾಗಲಿದೆ. .ಈಗಾಗಲೇ ಭಾರತ ತಂಡ ಕೋಚ್ ದ್ರಾವಿಡ್ ನೇತೃತ್ವದಲ್ಲಿ ತರಬೇತಿ ಆರಂಭಿಸಿತ್ತು.