Friday, August 7, 2026

BDA Apartments

Home Front Page ನಕಲಿ ಸಹಿ ಮಾಡಿ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದೇ ವಿಜಯೇಂದ್ರ: ಎಚ್ವಿ ಗಂಭೀರ ಆರೋಪ

ನಕಲಿ ಸಹಿ ಮಾಡಿ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದೇ ವಿಜಯೇಂದ್ರ: ಎಚ್ವಿ ಗಂಭೀರ ಆರೋಪ

ಮೈಸೂರು: ಯಡಿಯೂರಪ್ಪ ಜೈಲಿಗೆ ಹೋಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್ವಿ ಅವರನ್ನು ಜೈಲಿಗೆ ಕಳುಹಿಸಿದ್ದೇ ಪುತ್ರ ವಿಜಯೇಂದ್ರ. ಅವರ ನಕಲಿ ಸಹಿ ಮಾಡಿ ಅವರನ್ನು ಜೈಲಿಗೆ ಕಳುಹಿಸಿದ್ದ. ಈಗ ಇಡೀ ಕುಟುಂಬವನ್ನು ಜೈಲಿಗೆ ಕಳುಹಿಸುತ್ತಾನೆ. ವಿಜಯೇಂದ್ರ ವಿರುದ್ದ ಎಂ.ಎಲ್‌ಸಿ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

ವಿಜಯೇಂದ್ರನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಹಿಂದುಳಿದ ನಾಯರನ್ನು ತುಳಿಯುವ ಕೆಲಸ ಆಗುತ್ತಿದೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದು ವಿಜಯೇಂದ್ರ. ರಮೇಶ್ ಜಾರಕಿಹೋಳಿ, ಶ್ರೀರಾಮುಲು ಅವರನ್ನು ಮುಗಿಸಲು ಹೊರಟಿರೋದು ವಿಜಯೇಂದ್ರ. ಜಾರಕಿಹೋಳಿ ಪ್ರಕರಣದಲ್ಲೂ ವಿಜಯೇಂದ್ರ ಪಾತ್ರ ಇದೆ. ಎಷ್ಟು ದಿನ ನಿಮ್ಮದು ನಡೆಯುತ್ತೇ ನಾವು ನಡೆಯುತ್ತೇವೆ. ರಾಜಕಾರಣದಲ್ಲಿ ಇದು ಸರಿಯಲ್ಲ ಎಂದು ಮೈಸೂರಿನಲ್ಲಿ ವಿಜಯೇಂದ್ರ ವಿರುದ್ಧ ವಿಶ್ವನಾಥ್ ಗುಡುಗಿದರು.

ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ವಿಶ್ವನಾಥ್ ತಿರುಗೇಟು

ಯಡಿಯೂರಪ್ಪ ವಿರುದ್ಧ ಮಾತನಾಡುವವರು ಅವರ ಧೂಳಿಗೂ ಸಮರಲ್ಲ ಎಂಬ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ವಿಶ್ವನಾಥ್ ತಿರುಗೇಟು ನೀಡಿದರು.

ಸೋಮಶೇಖರ್ ನೀನು ಬೇಕಾದರೆ ಯಡಿಯೂರಪ್ಪ ಪಾದ ನೆಕ್ಕು. ಅವರ ಮಗನ ಭ್ರಷ್ಟಾಚಾರ ಅವ್ಯವಹಾರವನಿಮ್ಮ ಕಣ್ಣಿಗೆ ಕಾಣುತ್ತಿಲ್ಲವಾ.? ರಾಜ್ಯದಲ್ಲಿ 104 ಸ್ಥಾನ ಬಂದಿದ್ದ ಯಡಿಯೂರಪ್ಪರಿಂದ ಅಲ್ಲ. 25 ಸಂಸದರು ಗೆದ್ದಿದ್ದು ಯಡಿಯೂರಪ್ಪರಿಂದ ಅಲ್ಲ. ಇದು ಆಗಿದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ. ಅವರ ಹೆಸರನ್ನೇ ಕರ್ನಾಟಕದಲ್ಲಿ ಯಡಿಯೂರಪ್ಪ ಮರೆಸಿದ್ದಾರೆ.ಸಿಎಂ ಬದಲಾಗಲೇ ಬೇಕು ಇದರ ಪ್ರಕ್ರಿಯೆ ನಡೆದಿದೆ. ಫಲ ಬರಬಹುದು ತಡವಾಗಬಹುದು ಆದರೆ ಖಂಡಿತಾ ಬದಲಾವಣೆ ಆಗಲಿದೆ ಎಂದು ಮೈಸೂರಿನಲ್ಲಿ ಎಂ.ಎಲ್.ಸಿ ಎಚ್ ವಿಶ್ವನಾಥ್ ಹೇಳಿದರು.