Thursday, August 6, 2026

BDA Apartments

Home Front Page ಹಿಮಾಚಲ ಪ್ರದೇಶ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರರಾಗಿ ಶ್ರೀ ಜಸ್ಟೀಸ್ ರವಿ ವಿಜಯಕುಮಾರ್ ಮಳಿಮಠ ನೇಮಕ

ಹಿಮಾಚಲ ಪ್ರದೇಶ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರರಾಗಿ ಶ್ರೀ ಜಸ್ಟೀಸ್ ರವಿ ವಿಜಯಕುಮಾರ್ ಮಳಿಮಠ ನೇಮಕ

ನದ ದೆಹಲಿ, ಜೂನ್ ೨೯, ೨೦೨೧ (www.justkannada.in): ಹಿಮಾಚಲ ಪ್ರದೇಶದ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರರಾದ ಶ್ರೀ ಜಸ್ಟೀಸ್ ರವಿ ವಿಜಯಕುಮಾರ್ ಮಳಿಮಠ ಅವರನ್ನು ಜುಲೈ ೧ ರಿಂದ ಅನ್ವಯವಾಗುವಂತೆ ಅಲ್ಲಿನ ಮುಖ್ಯ ನ್ಯಾಯಾಧೀಶರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಈ ನೇಮಕಾತಿ ಆದೇಶವನ್ನು ಸಂವಿಧಾನದ ಪರಿಚ್ಛೇದ ೨೨೩ರಡಿ ಭಾರತದ ಮಾನ್ಯ ರಾಷ್ಟçಪತಿಗಳು ಹೊರಡಿಸಿದ್ದಾರೆ. ಹಿಮಾಚಲ ಪ್ರದೇಶದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರರಾದ ಶ್ರೀ ಜಸ್ಟೀಸ್ ಲಿಂಗಪ್ಪ ನರಾಯಣಸ್ವಾಮಿ ಅವರು ಇದೇ ತಿಂಗಳು ನಿವೃತ್ತಿ ಹೊಂದುತ್ತಿದ್ದು, ಅವರ ಸ್ಥಾನವನ್ನು ಶ್ರೀ ಜಸ್ಟೀಸ್ ರವಿ ವಿಜಯಕುಮಾರ್ ಅವರು ತುಂಬಲಿದ್ದಾರೆ.

Keywords: Himachal Pradesh/ High Court/ Judge/ Justice Ravi Vijaykumar Malimath