Sunday, August 2, 2026

BDA Apartments

Home Cinema ಚಿತ್ರವೊಂದಕ್ಕೆ ನಟ ಧನುಷ್ ಸಂಭಾವನೆ 50 ಕೋಟಿ ರೂ. !

ಚಿತ್ರವೊಂದಕ್ಕೆ ನಟ ಧನುಷ್ ಸಂಭಾವನೆ 50 ಕೋಟಿ ರೂ. !

ಬೆಂಗಳೂರು, ಜೂನ್ 25, 2021 (www.justkannada.in): ನಟ ಧನುಷ್ ಚಿತ್ರಕ್ಕೆ ಸಂಭಾವನೆ ರೂಪದಲ್ಲಿ 50 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರಂತೆ!

ಹಾಲಿವುಡ್ ಮಟ್ಟದಲ್ಲೂ ಮಿಂಚುತ್ತಿರುವ ಧನುಷ್ ನಟಿಸುತ್ತಿರುವ ಚಿತ್ರಗಳು ಹಿಟ್ ಮೇಲೆ ಹಿಟ್ ಆಗುತ್ತಿವೆ. ಇದರ ಬೆನ್ನಲ್ಲೆ ಅವರ ಸಂಭಾವನೆಯೂ ಏರುತ್ತಿದೆ.

ಶೇಖರ್‌ ಕಮ್ಮುಲಾ ಜೊತೆಗೆ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಸಂಭಾವನೆ ರೂಪದಲ್ಲಿ 50 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ಮೂಲಕ ಧನುಷ್ ತಮಿಳು ಚಿತ್ರರಂಗದ ಟಾಪ್‌-5 ನಟರ ಸಾಲಿಗೆ ಸೇರಿಕೊಂಡಿದ್ದಾರೆ. ಈ ಚಿತ್ರವನ್ನು ಏಕಕಾಲದಲ್ಲಿ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.