Saturday, September 19, 2026

BDA Apartments

ಬಿಸಿಸಿಐಗೆ ಐಪಿಎಲ್-ಟಿ20 ವಿಶ್ವಕಪ್ ನಡುವಿನ ತಿಕ್ಕಾಟ ! BDA JK_Adv BDA Adv
Home Front Page ಬಿಸಿಸಿಐಗೆ ಐಪಿಎಲ್-ಟಿ20 ವಿಶ್ವಕಪ್ ನಡುವಿನ ತಿಕ್ಕಾಟ !

ಬಿಸಿಸಿಐಗೆ ಐಪಿಎಲ್-ಟಿ20 ವಿಶ್ವಕಪ್ ನಡುವಿನ ತಿಕ್ಕಾಟ !

ಬೆಂಗಳೂರು, ಜೂನ್ 25, 2021 (www.justkannada.in): ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಿ ಅಕ್ಟೋಬರ್ 15ರವರೆಗೆ ಐಪಿಎಲ್ ಉಳಿದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.

ಅಕ್ಟೋಬರ್ 18 ರಿಂದ ಟಿ 20 ವಿಶ್ವಕಪ್ ಆಯೋಜಿಸಲು ಐಸಿಸಿ ಚಿಂತನೆ ನಡೆಸುತ್ತಿದೆ. ಹೀಗಾಗಿ ಐಪಿಎಲ್‌ನ ಹೊಸ ವೇಳಾಪಟ್ಟಿಯ ದಿನಾಂಕಕ್ಕೆ ಐಸಿಸಿ ಆಕ್ಷೇಪಣೆಗಳಿವೆ ಎನ್ನಲಾಗಿದೆ.

ಐಸಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಲ್ಲಿ ಬಿಸಿಸಿಐಗೆ ಸಮಸ್ಯೆ ಎದುರಾಗಲಿದೆ. ಟಿ-20 ವಿಶ್ವಕಪ್ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ ಜೂ.28 ರವರೆಗೆ ಗಡುವು ನೀಡಿದೆ. ಬಿಸಿಸಿಐ ಭಾರತದಲ್ಲೇ ಟಿ20 ವಿಶ್ವಕಪ್ ಆಯೋಜಿಸುವುದಾಗಿ ತಿಳಿಸಿದರೆ, ಐಪಿಎಲ್ ಯುಎಇನ 3 ಸ್ಟೇಡಿಯಂಗಳಲ್ಲಿ ನಡೆಯಲಿದೆ.