Friday, October 30, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಸಿದ್ದರಾಮಯ್ಯ ಭಾವಿ ಸಿಎಂ ಎಂಬ ಹೇಳಿಕೆ ನೀಡಿದ ಶಾಸಕ ಜಮೀರ್ ವಿರುದ್ಧ ಅಸಮಾಧಾನ ಹೊರಹಾಕಿದ ಆರ್.ಧೃವನಾರಾಯಣ್.

ಸಿದ್ದರಾಮಯ್ಯ ಭಾವಿ ಸಿಎಂ ಎಂಬ ಹೇಳಿಕೆ ನೀಡಿದ ಶಾಸಕ ಜಮೀರ್ ವಿರುದ್ಧ ಅಸಮಾಧಾನ ಹೊರಹಾಕಿದ ಆರ್.ಧೃವನಾರಾಯಣ್.

ಮೈಸೂರು,ಜೂನ್,20,2021(www.justkannada.in): ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ ಶಾಸಕ  ಜಮೀರ್ ಅಹ್ಮದ್ ಖಾನ್ ವಿರುದ್ಧ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಅಸಮಾಧಾನ ಹೊರಹಾಕಿದ್ದಾರೆ.jk

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಆರ್.ದೃವನಾರಾಯಣ್,  ಈ ಹಿಂದೆ ಜೆಡಿಎಸ್ ನಲ್ಲಿ ಇದ್ದಾಗ ಕುಮಾರಣ್ಣ ಅಂತಿದ್ರು ಇದೀಗ ಕಾಂಗ್ರೆಸ್ ನಲ್ಲಿದ್ದು ಸಿದ್ರಾಮಣ್ಣ ಅಂತಿದ್ದಾರೆ. ಜಮೀರ್ ಈ ರೀತಿ‌ ಹೇಳುವುದು ರೂಢಿ ಎಂದು ಶಾಸಕ ಜಮೀರ್ ವಿರುದ್ದ ಲೇವಡಿ ಮಾಡಿದರು.

ಸಿದ್ದರಾಮಯ್ಯ ಸಿಎಂ‌ ಎಂದು ಇದು ಹೇಳುವ ಸಮಯವಲ್ಲ. ಈ ರೀತಿಯ ಹೇಳಿಕೆಯಿಂದ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡುತ್ತದೆ. ತೀವ್ರ‌ ಬೇಸರ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಈ ರೀತಿಯ ಹೇಳಿಕೆಯನ್ನು ನೀಡದಂತೆ ಶಾಸಕ ಜಮೀರ್ ಗೆ ಸೂಚನೆ ನೀಡಿದರು. ಜಮೀರ್ ಗೆ ನೋಟಿಸ್ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಆರ್.ದೃವನಾರಾಯಣ್ ಹೇಳಿದರು.

Key words: R. Dhruvanarayan –outrage- against -MLA Jameer – statement -Siddaramaiah -CM.