ನಾಳೆಯಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಬಸ್ ಸಂಚಾರ: ಕೆಎಸ್ ಆರ್ ಟಿಸಿಯಿಂದ ಮಾರ್ಗಸೂಚಿ ಬಿಡುಗಡೆ.

ಬೆಂಗಳೂರು,ಜೂನ್,20,2021(www.justkannada.in):   ನಾಳೆಯಿಂದ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆ ಕೆಎಸ್ ಆರ್ ಟಿಸಿ ವತಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.jk

ರಾಜ್ಯದಲ್ಲಿ ಕೊರೋನಾ ಸೋಂಕಿನ  ಪ್ರಮಾಣ ಕಡಿಮೆಯಾದ ಹಿನ್ನೆಲೆ ನಾಳೆಯಿಂದ ಬಸ್ ಸಂಚಾರಕ್ಕೆ  ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಬಸ್ ಸಂಚಾರಕ್ಕೆ  ಕೆಎಸ್ ಆರ್ ಟಿಸಿ ವತಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಬಸ್ ಸಂಚಾರವಿರುತ್ತದೆ.

ಮೊದಲ ಹಂತದಲ್ಲಿ 3 ಸಾವಿರ ಬಸ್ ಗಳು ಕಾರ್ಯಾಚರಣೆ ನಡೆಸಲಿವೆ. ರಾಜ್ಯ ಸರ್ಕಾರದ ಕೊರೋನಾ ಮಾರ್ಗಸೂಚಿಯ ಅನುಸಾರವಾಗಿ ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರ ಆರಂಭಗೊಳ್ಳಲಿದೆ. ನಾಳೆಯಿಂದ ಅಂತರಾಜ್ಯ ಬಸ್ ಸಂಚಾರ ಇರುವುದಿಲ್ಲ. ಅಯಾ ರಾಜ್ಯಗಳ ಮಾರ್ಗಸೂಚಿ ಅನ್ವಯ ಮುಂದಿನ ದಿನಗಳಲ್ಲಿ ಅಂತರಾಜ್ಯ ಬಸ್ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.

Key words: Bus -service – tomorrow -Release – Guidelines -KSRTC