ಚುನಾವಣೆಗೂ ಮೊದಲೇ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡುವೆ ಗುದ್ಧಾಟ- ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಜೂನ್,20,2021(www.justkannada.in): ಚುನಾವಣೆಗೂ ಮೊದಲೇ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಬಡಿದಾಟ ಶುರುವಾಗಿದೆ. ಸಿದ್ಧರಾಮಯ್ಯ ಮತ್ತು ಡಿಕೆಶಿ ನಡುವೆ ಗುದ್ಧಾಟ ಪ್ರಾರಂಭವಾಗಿದೆ ಎಂದು   ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.jk

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ  ಸಚಿವ ಕೆ.ಎಸ್ ಈಶ್ವರಪ್ಪ, ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಗುಂಪಿನ ನಡುವೆ ಕಿತ್ತಾಟ ನಡೆಯುತ್ತಿದೆ. ಮೊದಲು ಚುನಾವಣೆಯಲ್ಲಿ ಗೆದ್ಧು ಶಾಸಕರಾಗಿ ಬರಲಿ. ನಂತರ ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ನವರು ಕಿತ್ತಾಡಲಿ ಎಂದು ಟಾಂಗ್ ನೀಡಿದರು.

ಸಿದ್ಧರಾಮಯ್ಯ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ,  ಕಾಂಗ್ರೆಸ್ ಸರ್ಕಾರವನ್ನ ಜನ ತಿರಸ್ಕರಿಸಿದರು. ಸಿದ್ಧರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲಿಸಿದರು. ಬಾದಾಮಿಯಲ್ಲಿ ಅಕಸ್ಮಾತ್ ಆಗಿ ಗೆದ್ಧರು. ಈಗ ಚಾಮರಾಜ ಪೇಟೆಗೆ ಹೋಗ್ತಾರಂತೆ ಎಂದು ಟೀಕಿಸಿದರು.

ಇನ್ನು ಎರಡು ವರ್ಷಗಳ ಕಾಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಮುಂದಿನ ಬಾರಿಯೂ ಬಿಜೆಪಿ ಗೆದ್ಧು ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Key words:  Conflict- between -Siddaramaiah –DK shivakumar-CM post-Minister- KS Eshwarappa.