Thursday, August 6, 2026

BDA Apartments

Home Cinema ಲಾಕ್ ಡೌನ್ ಹಿನ್ನೆಲೆ: ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್…

ಲಾಕ್ ಡೌನ್ ಹಿನ್ನೆಲೆ: ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್…

ಬೆಂಗಳೂರು,ಮೇ,8,2021(www.justkannada.in): ಜನತಾ ಕರ್ಫ್ಯೂ ಜಾರಿಮಾಡಿದರೂ  ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ  ಮೇ 10ರಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ  ಧಾರವಾಹಿ, ರಿಯಾಲಿಟಿ ಶೋಗಳ ಶೂಟಿಂಗ್ ಗೆ ಬ್ರೇಕ್ ಬಿದ್ದಿದೆ.jk

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್,  ಲಾಕ್ ಡೌನ್  ಹಿನ್ನೆಲೆಯಲ್ಲಿ  ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು. ಬೆಂಗಳೂರು ಹೊರವಲಯ, ಪ್ರವಾಸಿ ತಾಣ, ರೆಸಾರ್ಟ್ ಯಾವುದೇ ಭಾಗದಲ್ಲಿ ಚಿತ್ರೀಕರಣಗಳು ನಡೆಸಿದರೂ ಅಂತವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.lockdown-break-shooting-serial-reality-shows

ಅಲ್ಲದೇ ಬಿಗ್ ಬಾಸ್ ಶೂಟಿಂಗ್  ಕೂಡ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ಚಿತ್ರೀಕರಣವಾಗಿರುವ ಎಪಿಸೋಡ್ ಗಳು ಮಾತ್ರ ಪ್ರಸಾರವಾಗಲಿವೆ. ಮೇ 24ರವರೆಗೆ ಹೊಸ ಎಪಿಸೋಡ್ ಗಳ ಚಿತ್ರೀಕರಣಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

Key words: Lockdown -Break –shooting-  serial- reality shows.