Friday, September 25, 2026

BDA Apartments

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕೊರೊನಾ ಸೋಂಕಿಗೆ ಬಲಿ BDA JK_Adv BDA Adv
Home Cinema ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕೊರೊನಾ ಸೋಂಕಿಗೆ ಬಲಿ

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕೊರೊನಾ ಸೋಂಕಿಗೆ ಬಲಿ

ಬೆಂಗಳೂರು, ಏಪ್ರಿಲ್ 28, 2021 (www.justkannada.in): ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ರಾಮು ಕಣಗಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ರಾಮು ಕಣಗಾಲ್ ಅವರು ಪ್ರಖ್ಯಾತ ಭರತನಾಟ್ಯ ಕಲಾವಿದ ಹಾಗೂ ನಿರ್ದೇಶಕರಾಗಿದ್ದು, ಕಣಗಾಲ್ ನೃತ್ಯಾಲಯ ಎನ್ನುವ ಹೆಸರಿನಲ್ಲಿ ನಾಟ್ಯಶಾಲೆ ನಡೆಸುತ್ತಿದ್ದರು.