Friday, September 25, 2026

BDA Apartments

Mysuru Dasara Kambala 2026 Dates BDA JK_Adv BDA Adv
Home Front Page ದಸರಾಗೆ ಈ ಬಾರಿ ‘ಕೋಣಗಳ ಪಯಣ’!

ದಸರಾಗೆ ಈ ಬಾರಿ ‘ಕೋಣಗಳ ಪಯಣ’!

ಮೈಸೂರು, ಸೆಪ್ಟಂಬರ್‌,25, 2026(www.justkannada.in) ಮೈಸೂರು ದಸರಾ ಎಂದರೆ ಗಜಪಡೆಗಳ ಗಜಪಯಣ, ಅಂಬಾರಿ ಆನೆಗಳ ವೈಭವ. ಆದರೆ ಈ ಬಾರಿ ದಸರಾ ಮಹೋತ್ಸವಕ್ಕೆ ಕರಾವಳಿಯ ಕಂಬಳದ ಕೋಣಗಳೂ ಹೊಸ ಮೆರುಗು ನೀಡಲಿವೆ.

ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಕಂಬಳ ಕೂಟ ನಡೆಯಲಿದ್ದು, ಕರಾವಳಿಯಿಂದ ಸುಮಾರು 150ರಿಂದ 160 ಜೊತೆ ಪ್ರಸಿದ್ಧ ಕಂಬಳದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.

ಮೈಸೂರಿನ ರಿಂಗ್ ರೋಡ್ ವ್ಯಾಪ್ತಿಯ 20 ಎಕರೆ ಪ್ರದೇಶದಲ್ಲಿ ‘ವಿಜಯ ದಶಮಿ’ ಕಂಬಳದ ಕರೆ ಸಜ್ಜಾಗುತ್ತಿದೆ. 147 ಮೀಟರ್ ಉದ್ದದ ಕರೆಯಲ್ಲಿ 140 ಮೀಟರ್ ಓಟದ ಅಂತರ ಇರಲಿದೆ. ಅ.15ರಂದು 5 ಜೊತೆ ಕೋಣಗಳೊಂದಿಗೆ ಟ್ರಯಲ್ ಓಟ ನಡೆಯಲಿದೆ.Mysuru Dasara Kambala 2026 Dates kambala

ಅ.16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೋಣಗಳ ‘ಪಯಣ’ ಆರಂಭವಾಗಲಿದೆ. ಮಡಿಕೇರಿಯಲ್ಲಿ 2ರಿಂದ 3 ಗಂಟೆ ವಿಶ್ರಾಂತಿ ನೀಡಿ, ಅಂದು ರಾತ್ರಿ ಮೈಸೂರಿಗೆ ತಲುಪಲಿವೆ. ಅ.17ರಂದು ಸಂಪೂರ್ಣ ವಿಶ್ರಾಂತಿ ನೀಡಿ, ಅ.18 ಮತ್ತು 19ರಂದು ಕಂಬಳ ನಡೆಯಲಿದೆ.

ಗಜಪಡೆಗಳ ಗಜಪಯಣಕ್ಕೆ ಸಾಕ್ಷಿಯಾಗುತ್ತಿದ್ದ ಮೈಸೂರು ದಸರಾ, ಈ ಬಾರಿ ಕರಾವಳಿಯ ಕಂಬಳದ ಕೋಣಗಳ ಪಯಣಕ್ಕೂ ಸಾಕ್ಷಿಯಾಗಲಿದೆ.ದಸರಾಗೆ ಈ ಬಾರಿ ‘ಕೋಣಗಳ ಪಯಣ’! jk02

Mysore Dasara, kambala, Journey , Buffaloes

English Summary
Title

Mysuru Dasara Kambala 2026: Dates, Venue & Guide to the Historic Coastal Buffalo Race

Short Description
Experience history at Mysuru Dasara 2026 as Kambala, the traditional coastal Karnataka buffalo race, makes its grand debut. Scheduled for October 18 and 19, 2026, this thrilling event will feature 150 to 160 elite buffalo pairs competing on a specially prepared 147-metre slush track near the VTU Regional Centre in Sathagalli. To ensure peak performance after a grueling 200 to 250 km journey from coastal regions like Udupi and Puttur, the racing animals will take mandatory medical rest stops in Madikeri before reaching the royal city. Don't miss this spectacular fusion of coastal folklore and royal heritage during Karnataka's flagship festival.