Sunday, October 11, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಇಂದಿನಿಂದ ಐಪಿಎಲ್ ಫೈಟ್ ಶುರು

ಇಂದಿನಿಂದ ಐಪಿಎಲ್ ಫೈಟ್ ಶುರು

ಬೆಂಗಳೂರು, ಏಪ್ರಿಲ್ 09, 2021 (www.justkannada.in): 

ಇಂದಿನಿಂದ ಐಪಿಎಲ್ 14 ನೇ ಆವೃತ್ತಿಗೆ ಚಾಲನೆ ಸಿಗಲಿದೆ.

ದೇಶದೆಲ್ಲೆಡೆ ಕೊರೋನಾ ಭೀತಿ ಮನೆ ಮಾಡಿರುವ ಬೆನ್ನಲ್ಲೇ ಐಪಿಎಲ್ ಪಂದ್ಯಗಳು ಆರಂಭವಾಗಲಿದೆ. ಕೊರೊನಾ ಆತಂಕದ ನಡುವೆಯೂ ಅಭಿಮಾನಿಗಳು ಟಿ-20 ಕಾದಾಟ ನೋಡಲು ಕಾತರರಾಗಿದ್ದಾರೆ.

ಈ ಬಾರಿ ಕೊರೋನಾ ಕಾರಣದಿಂದ ವೀಕ್ಷಕರು ಮೈದಾನಕ್ಕೆ ಬರಲು ಅವಕಾಶವಿಲ್ಲ. ಆದರೆ ಸ್ಟಾರ್ ಸ್ಪೋರ್ಟ್ಸ್‍ ಮತ್ತು ಹಾಟ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಜೆಯ ಪಂದ್ಯಗಳು 3.30 ರಿಂದ ಮತ್ತು ರಾತ್ರಿಯ ಪಂದ್ಯಗಳು ಸಂಜೆ 7.30 ರಿಂದ ಪಂದ್ಯಗಳು ಆರಂಭವಾಗಲಿದೆ. ಸೀಮಿತ ಮೈದಾನಗಳಲ್ಲಷ್ಟೇ ಪಂದ್ಯಗಳು ನಡೆಯುತ್ತಿವೆ.