Tuesday, September 22, 2026

BDA Apartments

ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್… BDA JK_Adv BDA Adv
Home Cinema ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್…

ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್…

ಮೈಸೂರು,ಏಪ್ರಿಲ್,7,2021(www.justkannada.in):  ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ಮೈಸೂರಿನಲ್ಲಿ ನಡೆಯಿತು.

Illegally,Sand,carrying,Truck,Seized,arrest,driver

ಮೈಸೂರಿನಲ್ಲಿ ಇಂದು ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್ ಅವರ ಅಂತ್ಯಕ್ರಿಯೆ ನೆರವೇರಿತು. ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಜನಿಸಿದ ಪ್ರತಿಮಾದೇವಿ ಅವರ ಮೂಲ ಹೆಸರು ಮೋಹಿನಿ. ಕೃಷ್ಣಲೀಲಾ ಚಿತ್ರದ ಮೂಲಕ ನಾಯಕ ನಟಿಯಾದ ಪ್ರತಿಮಾದೇವಿ, ಭಕ್ತ ರಾಮದಾಸ್, ಜಗನ್ಮೋಹಿನಿ, ನಾಗಕನ್ಯ, ಮುಟ್ಟಿದ್ದೆಲ್ಲ ಚಿನ್ನ, ಪ್ರಭುಲಿಂಗ ಲೀಲೆ, ದಲ್ಲಾಳಿ, ಶಿವಶರಣೆ ನಂಬಿಯಕ್ಕ, ಧರ್ಮಸ್ಥಳ ಮಹಾತ್ಮೆ, ಮಂಗಳ ಸೂತ್ರ, ವರದಕ್ಷಿಣೆ, ರಾಜ ಸತ್ಯವ್ರತ, ಶ್ರೀನಿವಾಸ ಕಲ್ಯಾಣ ಹೀಗೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಪ್ರತಿಮ ಅಭಿಯನ ಮಾಡಿದವರು. ಭಕ್ತಚೇತ ಸಿನಿಮಾ ಮೂಲಕ ಡಾ.ರಾಜ್ ಕುಮಾರ್ ಅವರೊಂದಿಗೂ ನಟಿಸಿದ ಹಿರಿಯ ಕಲಾವಿದೆ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಸಿನಿಮಾಗಳಿಗೆ ಜೀವ ತುಂಬಿದವರು. 1950-60ರ ದಶಕದಲ್ಲಿ ಸೂಪರ್ ಸ್ಟಾರ್  ಆಗಿ ಮೆರೆದವರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಪ್ರತಿಮಾದೇವಿ ಅವರು ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ಅವರ ನಿವಾಸದಲ್ಲಿಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇವರ  ಪುತ್ರ ರಾಜೇಂದ್ರ ಸಿಂಗ್ ಬಾಬು, ಅಳಿಯ ಜೈಜಗದೀಶ್, ಮೊಮ್ಮಗ ಆದಿತ್ಯ ಸೇರಿದಂತೆ ಹಲವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಕೃಪೆ-internet

25 ವಾರಕ್ಕೂ ಹೆಚ್ಚು ಕಾಲ ಓಡಿದ್ದ ಜಗನ್ಮೋಹಿನಿಯಂತಹ ಸೂಪರ್ ಹಿಟ್ ಚಿತ್ರದ ನಾಯಕ ನಟಿಯಾದ ಪ್ರತಿಮಾದೇವಿ, ತಮ್ಮದೇ ಸಂಸ್ಥೆಯ ಮೂಲಕ ಇಡೀ ಕುಟುಂಬವನ್ನು ಸಿನಿಮಾ ರಂಗದಲ್ಲಿ ಬೆಳೆಸಿದವರು. ಕನ್ನಡ ಚಿತ್ರರಂಗದ ಪ್ರಾರಂಭಿಕ ದಿನಗಳಲ್ಲಿ ಮಿಂಚಿ ಮೆರೆದ ಪ್ರತಿಮಾದೇವಿ ಅವರ ಅಂತಿಮ ಯಾತ್ರೆ ಸರಳವಾಗಿತ್ತು. ಸಿಂಗ್ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯ್ತು. ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಸುಡುವ ಸ್ಮಶಾನದಲ್ಲಿ ಪ್ರತಿಮಾದೇವಿ ಪಂಚಭೂತಗಳಲ್ಲಿ ಲೀನವಾದರು ಎಂದು ಅಳಿಯ ಜೈಜಗದೀಶ್  ತಿಳಿಸಿದರು.

Key words: senior actress- Pratimadevi Shankar Singh- dead-mysore